Home ಅಂತಾರಾಷ್ಟ್ರೀಯ ಬಲೂಚಿಸ್ತಾನ್ ನಲ್ಲಿ ಭೂಕಂಪ: 20 ಮಂದಿ ಮೃತ್ಯು, 300ಕ್ಕೂ ಹೆಚ್ಚು ಮಂದಿ ಗಾಯ

ಬಲೂಚಿಸ್ತಾನ್ ನಲ್ಲಿ ಭೂಕಂಪ: 20 ಮಂದಿ ಮೃತ್ಯು, 300ಕ್ಕೂ ಹೆಚ್ಚು ಮಂದಿ ಗಾಯ

ಇಸ್ಲಮಾಬಾದ್ : ಪಾಕಿಸ್ತಾನದ ದಕ್ಷಿಣ ಪ್ರಾಂತ್ಯದ ಬಲೂಚಿಸ್ತಾನ್ ನಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಸಾವನ್ನಪ್ಪಿ, 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

- Advertisement -

ರಿಕ್ಟರ್ ಮಾಪಕದಲ್ಲಿ 5.7 . ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರ ಬಿಂದು ಹರ್ನಾಯ್ ಜಿಲ್ಲೆಯ ೧೫ ಕಿ.ಮೀ ಆಳದಲ್ಲಿ ದಾಖಲಾಗಿತ್ತು ಎಂದು ವರದಿಗಳು ತಿಳಿಸಿವೆ.

- Advertisement -

ಸಾವನ್ನಪ್ಪಿದವರ ಪೈಕಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -
- Advertisment -

Most Popular