Home ರಾಷ್ಟ್ರೀಯ ಕೇರಳದ ದಕ್ಷಿಣ, ಕೇಂದ್ರ ಭಾಗಗಳಲ್ಲಿ ಅವ್ಯಾಹತ ಮಳೆ: 9 ಮಕ್ಕಳು ಸೇರಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆ

ಕೇರಳದ ದಕ್ಷಿಣ, ಕೇಂದ್ರ ಭಾಗಗಳಲ್ಲಿ ಅವ್ಯಾಹತ ಮಳೆ: 
9 ಮಕ್ಕಳು ಸೇರಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆ

ತಿರುವನಂತಪುರ: ಕಳೆದ ಕೆಲ ದಿನಗಳಿಂದ ಕೇರಳ ರಾಜ್ಯದ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅವಘಡ ಸಂಭವಿಸಿ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ. ಅವರಲ್ಲಿ 9 ಮಕ್ಕಳು ಕೂಡ ಸೇರಿದ್ದಾರೆ.

- Advertisement -

ನಾಡಿದ್ದು ಬುಧವಾರದಿಂದ ಮತ್ತಷ್ಟು ಧಾರಾಕಾರ ಮಳೆ ರಾಜ್ಯದಾದ್ಯಂತ ಸುರಿಯಬಹುದೆಂದು ಭಾರತೀಯ ಹವಾಮಾನ ಇಲಾಖೆ ಹೇಳಿದ್ದು ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 13 ಮಂದಿ ಮೃತಪಟ್ಟಿದ್ದು ಅವರಲ್ಲಿ 12 ಮಂದಿ ಕೂಟ್ಟಿಕ್ಕಲ್ ಪಂಚಾಯತ್ ವಲಯವೊಂದರಲ್ಲಿಯ ಜನರಾಗಿದ್ದಾರೆ.

- Advertisement -

ಕೇರಳದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವು ಸ್ಥಿರವಾಗಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ.

- Advertisement -

ಅಕ್ಟೋಬರ್ 18ರ ಸೋಮವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಶಬರಿಗಿರಿ ಯೋಜನೆಯ ಭಾಗವಾಗಿರುವ ಕಕ್ಕಿ ಅಣೆಕಟ್ಟೆಯ ಶಟರ್‌ಗಳನ್ನು ತೆರೆಯಲಿದ್ದು, ಮತ್ತು ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಈ ಮಧ್ಯೆ ಮಂಗಳವಾರ ಶಬರಿಮಲೆ ಬೆಟ್ಟದ ದೇಗುಲಕ್ಕೆ ತೆರಳಲು ಕಾಯುತ್ತಿರುವ ಅಯ್ಯಪ್ಪ ಭಕ್ತರಿಗೆ ನೀರು ಬಿಡುವ ನಿರ್ಧಾರ ಕಳವಳಕಾರಿಯಾಗಿದೆ.

ಮೊನ್ನೆ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ 10 ಮಂದಿ ಮೃತಪಟ್ಟಿದ್ದರೆ ಮತ್ತಿಬ್ಬರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಭೂಕುಸಿತದಿಂದ ಮಣ್ಣಿನ ಅವಶೇಷಗಳಡಿ ಸಿಕ್ಕಿಹಾಕಿಕೊಂಡವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕೂವಪಲ್ಲಿ ಜಿಲ್ಲೆಯಲ್ಲಿ ಪ್ರವಾಹದ ನೀರಿನಲ್ಲಿ ಮತ್ತೊಬ್ಬ ವ್ಯಕ್ತಿ ಕೊಚ್ಚಿ ಹೋಗಿದ್ದಾರೆ.

ಇಡುಕ್ಕಿ ಜಿಲ್ಲೆಯಲ್ಲಿ 6 ಮಂದಿ ಕೊಕ್ಕಯಾರ್ ಭೂಕುಸಿತಕ್ಕೆ ಮೃತಪಟ್ಟಿದ್ದಾರೆ. ಮಗುವೊಂದು ನಾಪತ್ತೆಯಾಗಿದೆ. ಕೊಕ್ಕಯರ್ ಮತ್ತು ಪೆರುವಂತನಮ್ ಗ್ರಾಮಗಳಲ್ಲಿ ಇಬ್ಬರು ವ್ಯಕ್ತಿಗಳು ಮಳೆ ಸಂಬಂಧಿ ಅವಘಡಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ತೊಡುಪುಝದಲ್ಲಿ ಕಾರು ನೀರಿನಲ್ಲಿ ಕೊಚ್ಚಿ ಹೋಗಿ ಇಬ್ಬರು ನಾಪತ್ತೆಯಾಗಿದ್ದಾರೆ.

- Advertisment -

Most Popular