Home Featured ಉದ್ಯೋಗ ಕೆಲಸಕ್ಕಾಗಿ ಹುಡುಕಾಡುತ್ತಿರುವಿರೇ? ಇನ್ನು ಮುಂದೆ ಗೂಗಲ್ ನಿಮಗೆ ಸಹಾಯ ಮಾಡಲಿದೆ!

ಕೆಲಸಕ್ಕಾಗಿ ಹುಡುಕಾಡುತ್ತಿರುವಿರೇ? ಇನ್ನು ಮುಂದೆ ಗೂಗಲ್ ನಿಮಗೆ ಸಹಾಯ ಮಾಡಲಿದೆ!

ನವದೆಹಲಿ: ಕೊರೋನಾ ನಂತರದ ಇದೀಗ ಉದ್ಯೋಗವನ್ನು ಹೆಚ್ಚಿಸಲು ಉದ್ಯೋಗ ಪ್ರಮಾಣ ಪತ್ರಗಳಿಗೆ ನೋಂದಣಿಯನ್ನು ತೆರೆಯುವುದು, ಉದ್ಯೋಗದಾತರ ಒಕ್ಕೂಟವನ್ನು ವಿಸ್ತರಿಸುವುದು ಮತ್ತು ಉದ್ಯೋಗ ಹುಡುಕಾಟವನ್ನು ಸುಧಾರಿಸಲು ಹೊಸ ಸಾಧನಗಳನ್ನು ವಿಸ್ತರಿಸುವುದು ಸೇರಿದಂತೆ ಹೊಸ ಉಪಕ್ರಮಗಳನ್ನು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಘೋಷಿಸಿದ್ದಾರೆ.

- Advertisement -


ಡೇಟಾ ಅನಾಲಿಟಿಕ್ಸ್, ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಮತ್ತು ಯೂಸರ್ ಎಕ್ಸ್ ಪೀರಿಯನ್ಸ್ (UX) ಡಿಸೈನ್ ನ ಕ್ಷೇತ್ರಗಳಲ್ಲಿ ಇತ್ತೀಚಿನ ಗೂಗಲ್ ವೃತ್ತಿ ಪ್ರಮಾಣಪತ್ರಗಳಿಗೆ ದಾಖಲಾತಿಯು ಈಗ ತೆರೆದಿದೆ ಎಂದು ಪಿಚೈ ಹೇಳಿದ್ದಾರೆ.

‘ನಾವು ಹೊಸ ಅಸೋಸಿಯೇಟ್ ಆಂಡ್ರಾಯ್ಡ್ ಡೆವಲಪರ್ ಸರ್ಟಿಫಿಕೇಷನ್ ಅನ್ನು ಘೋಷಿಸುತ್ತಿದ್ದೇವೆ, ಇದು ಆಂಡ್ರಾಯ್ಡ್ ಅಭಿವೃದ್ಧಿಯಲ್ಲಿ ಪ್ರವೇಶ ಮಟ್ಟದ ಉದ್ಯೋಗಗಳಿಗೆ ಕಲಿಯುವವರನ್ನು ತಯಾರಿಸುತ್ತದೆ.ಅಮೆರಿಕದಲ್ಲಿ ಈಗ 1.3 ಮಿಲಿಯನ್ ಉದ್ಯೋಗಗಳು ತೆರೆದಿರುವ ಕಾರಣ ಈ ಅವಕಾಶವು ಗಮನಾರ್ಹವಾಗಿದೆ’ ಎಂದು ಅವರು ಕಳೆದ ವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

- Advertisement -

ಡಿಜಿಟಲ್ ಕಾರ್ಯವಿಧಾನಗಳಿಗೆ ಹೆಚ್ಚು ಹೆಚ್ಚು ಉದ್ಯಮಗಳು ಅಪ್ಪಿಕೊಳ್ಳುವುದರಿಂದ, 2025ರ ವೇಳೆಗೆ ಎಲ್ಲಾ ಉದ್ಯೋಗಿಗಳ ಪೈಕಿ 50 ಪ್ರತಿಶತದಷ್ಟು ಉದ್ಯೋಗಿಗಳಿಗೆ ಮತ್ತೆ ಕೌಶಲ್ಯಗಳ ಬಗ್ಗೆ ತಿಳಿಯುವ ಅವಶ್ಯಕತೆ ಯನ್ನು ಹೊಂದಿರುವುದಾಗಿ ಅಂದಾಜು ಮಾಡಲಾಗಿದೆ. ಲಾಭರಹಿತ, ಕಾರ್ಮಿಕ ಅಭಿವೃದ್ಧಿ ಮಂಡಳಿಗಳು ಮತ್ತು ಇತರ ಸಮುದಾಯ ಸಂಘಟನೆಗಳ ಮೂಲಕ ವಿತರಿಸಲು ನಾವು ಒಂದು ಲಕ್ಷ ವಿದ್ಯಾರ್ಥಿ ವೇತನಗಳನ್ನು ಸಹ ನೀಡುತ್ತಿದ್ದೇವೆ ಎಂದು ಪಿಚೈ ಹೇಳಿದರು.

ಈ ಪ್ರಮಾಣ ಪತ್ರಗಳನ್ನು ಪಡೆದವರನ್ನು ನೇಮಿಸಿಕೊಳ್ಳಲು ಉತ್ಸುಕರಾಗಿರುವ 130ಕ್ಕೂ ಹೆಚ್ಚು ಉದ್ಯೋಗದಾತರು ಗೂಗಲ್ ಸಂಸ್ಥೆ ಸೇರಿದ್ದಾರೆ. ‘ನಾವು ಇತರ ಕೆಲವು ವೃತ್ತಿಪರ ಟ್ರ್ಯಾಕ್ ಗಳ ಜೊತೆಗೆ ನಮ್ಮ ಕೆರಿಯರ್ ಸರ್ಟಿಫಿಕೇಟ್ ಕ್ಷೇತ್ರಗಳಲ್ಲಿ ಗೂಗಲ್ ನ ಅಪ್ರೆಂಟಿಸ್ ಶಿಪ್ ಪ್ರೋಗ್ರಾಂಗಾಗಿ ಅಪ್ಲಿಕೇಶನ್ ಗಳನ್ನು ತೆರೆಯುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ನೂರಾರು ಅಪ್ರೆಂಟಿಸ್ ಗಳನ್ನು ನೇಮಕ ಮಾಡಿಕೊಂಡು ಆನ್ ದಿ-ಜಾಬ್ ತರಬೇತಿ ಮತ್ತು ಅಪ್ಲೈ ಲರ್ನಿಂಗ್ ನಲ್ಲಿ ಭಾಗವಹಿಸಲಿದ್ದೇವೆ’ ಎಂದು ಪಿಚ್ಚೈ ಮಾಹಿತಿ ನೀಡಿದರು.

- Advertisement -
- Advertisment -

Most Popular