Home ಗಲ್ಫ್ ವಾರ್ತೆ ದುಬೈನಲ್ಲಿದೆ ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು: "ಖಾನ್ ಐ ಸಾಬೂನ್" ಬೆಲೆ ಎಷ್ಟು ಗೊತ್ತೇ?

ದುಬೈನಲ್ಲಿದೆ ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು: “ಖಾನ್ ಐ ಸಾಬೂನ್” ಬೆಲೆ ಎಷ್ಟು ಗೊತ್ತೇ?

ದುಬೈ: ಹದಿನೈದನೇ ಶತಮಾನದಿಂದಲೂ ಸಾಬೂನು ತಯಾರಿಕ ಕಾರ್ಖಾನೆ ಹೊಂದಿರುವ ದುಬೈನ ಸಣ್ಣ ಕುಟುಂಬವೊಂದು ವಿಶ್ವದಲ್ಲೇ ಅತ್ಯಂತ ದುಬಾರಿ ಸಾಬೂನು ತಯಾರಿಸಿರುವುದಾಗಿ ಹೇಳಿಕೊಂಡಿದೆ.

- Advertisement -

ಸಾಬೂನಿನ ಬೆಲೆ 2,800 ಅಮೆರಿಕ ಡಾಲರ್ ಆಗಿದ್ದು, ಭಾರತೀಯ ಕರೆನ್ಸಿ ಪ್ರಕಾರ ಬರೋಬ್ಬರಿ 2,06,955 ರೂ. ವೆಚ್ಚವಾಗುತ್ತದೆ. ಹ್ಯಾಂಡ್ಮೇಡ್ ಸಾಬೂನಿನ ಬ್ರ್ಯಾಂಡ್ ಆಗಿರುವ “ಖಾನ್ ಐ ಸಾಬೂನ್” ಕಂಪನಿಯನ್ನು ಲೆಬನಾನ್ ಮತ್ತು ತ್ರಿಪೋಲಿ ಮೂಲದ ಬ್ಯಾಡರ್ ಆ್ಯಂಡ್ ಸನ್ಸ್ ಸೃಷ್ಟಿಸಿದೆ.

- Advertisement -

ಈ ಕಂಪನಿ ವಿವಿಧ ರೀತಿಯ ದುಬಾರಿ ಸಾಬೂನು ತಯಾರಿಸುತ್ತದೆ. ಇಷ್ಟೇ ಅಲ್ಲದೆ, ಸ್ವಾಭಾವಿಕ ಸುಗಂಧದ್ರವ್ಯ ಮತ್ತು ಅಗತ್ಯ ಎಣ್ಣೆಗಳು ಸೇರಿದಂತೆ ಅನೇಕ ಚರ್ಮ ರಕ್ಷಕ ಉತ್ಪನ್ನಗಳನ್ನು ಕಂಪನಿ ತಯಾರಿಸುತ್ತದೆ.

- Advertisement -

ಕಂಪನಿಯ ವಿಶೇಷ ಉತ್ಪನ್ನಗಳನ್ನು ದುಬೈ ಮತ್ತು ಯುಎಇನ ಪ್ರಮುಖವಾದ ಸ್ಟೋರ್​ಗಳಲ್ಲಿ ಮಾತ್ರ ನೋಡಬಹುದು ಮತ್ತು ಖರೀದಿಸಬಹುದು. ಆದಾಗ್ಯು ದುಬಾರಿ ಉತ್ಪನ್ನಗಳು ಕೇವಲ ವಿಶೇಷ ವ್ಯಕ್ತಿಗಳು ಮತ್ತು ಗಣ್ಯರಿಗೆ ಮಾತ್ರ ಮಾಡಲ್ಪಟ್ಟಿದೆ. ಇಂತಹ ದುಬಾರಿ ಸಾಬೂನನ್ನು ಮೊದಲ ಬಾರಿಗೆ 2013ರಲ್ಲಿ ಮಾಡಲಾಯಿತು. ಬಳಿಕ ಅದನ್ನು ಕತಾರ್​ನ ಪ್ರಥಮ ಮಹಿಳೆಗೆ ಉಡುಗೊರೆಯಾಗಿ ನೀಡಲಾಗಿತ್ತು.

ದುಬಾರಿ ಸಾಬೂನನ್ನು ಚಿನ್ನ ಮತ್ತು ವಜ್ರದ ಪುಡಿಯಿಂದ ಮಾಡಲಾಗುತ್ತದೆ. ನೋಡಲು ಚೀಸ್​ ರೂಪದಲ್ಲಿ ಕಂಡರೂ ದುಬಾರಿ ಚೀಸ್​ ತುಣುಕನ್ನು ಸಾಬೂನಿನಲ್ಲಿ ಬಳಸಲಾಗಿರುತ್ತದೆ. 17 ಗ್ರಾಂ 24 ಕ್ಯಾರೆಟ್​ ಗೋಲ್ಡ್​, ಕೆಲವೇ ಗ್ರಾಂ ಡೈಮಂಡ್​ ಪೌಡರ್​, ಸಾವಯವ ಜೇನು, ಶುದ್ಧವಾದ ಆಲಿವ್​ ಎಣ್ಣೆ, ಖರ್ಜುರ ಸೇರಿದಂತೆ ಮುಂತಾದ ವಿಶೇಷ ಪದಾರ್ಥಗಳಿಂದ ಸಾಬೂನು ತಯಾರಿಸಲಾಗಿದೆ.

- Advertisment -

Most Popular