Home ಕ್ರೀಡೆ T-20 ವಿಶ್ವಕಪ್:ಬಾಂಗ್ಲಾದೇಶದ ವಿರುದ್ಧ ಸ್ಕಾಟ್ ಲ್ಯಾಂಡ್ ಗೆ 6 ರನ್ ಗಳ ಜಯ

T-20 ವಿಶ್ವಕಪ್:
ಬಾಂಗ್ಲಾದೇಶದ ವಿರುದ್ಧ ಸ್ಕಾಟ್ ಲ್ಯಾಂಡ್ ಗೆ 6 ರನ್ ಗಳ ಜಯ

ಅಲ್ ಅಮೀರಾತ್: T-20 ವಿಶ್ವ ಕಪ್ ನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಸ್ಕಾಟ್ ಲ್ಯಾಂಡ್ 6 ರನ್ ಗಳ‌ ಜಯ ಸಾದಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ ಲ್ಯಾಂಡ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 140 ಗಳಿಸಿತು.

- Advertisement -

ಸ್ಕಾಟ್ ಲ್ಯಾಂಡ್ ನ ಕ್ರಿಸ್ ಗ್ರೀವ್ಸ್,‌ ಮಾರ್ಕ್ ವಾಟ್ ಮತ್ತು ಮಾನ್ಸೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದರೆ, ಉಳಿದ ಆಟಗಾರರು ಒಂದಂಕೆಯ ರನ್ ಗಳಿಸುವಲ್ಲಿ ಮಾತ್ರ ಶಕ್ತರಾದರು. ಕ್ರಿಸ್ ಗ್ರೀವ್ಸ್ 45(28), ಮಾನ್ಸೆ 29(23), ಮಾರ್ಕ್ ವಾಟ್ 22(17) ತಂಡದ ಅಗ್ರ ಸ್ಕೋರರ್ ಎನಿಸಿಕೊಂಡರು.

- Advertisement -

ಸ್ಕಾಟ್ ಲ್ಯಾಂಡ್ ನೀಡಿದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 137 ರನ್ ಬಾರಿಸಿ 6 ರನ್ ಗಳ ಸೋಲನ್ನು ಅನುಭವಿಸಿತು. ಬಾಂಗ್ಲಾದೇಶದ ಮುಶ್ಫಿಕುರ್ ರಹೀಮ್ 38(36), ಮಹ್ಮುದುಲ್ಲಾ 23(22), ಶಾಕಿಬ್ ಹಸನ್ 20(28), ಅಫೀಫ್ ಹುಸೇನ್ 18(12) ತಂಡದ ಗರಿಷ್ಟ ಸ್ಕೋರರ್ ಎನಿಸಿಕೊಂಡರು. ಉಳಿದ ಆಟಗಾರರ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತಂಡವು 6 ರನ್ ಸೋಲನ್ನನುಭವಿಸಿತು.

ಸ್ಕಾಟ್ ಲ್ಯಾಂಡ್ ನ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಬ್ರಾಡ್ಲಿ ವೀಲ್ 3, ಕ್ರಿಸ್ ಗ್ರೀವ್ಸ್ 2, ಮಾರ್ಕ್ ವಾಟ್ ಮತ್ತು ಜೋಶ್ ದಾವೆ ತಲಾ 1 ವಿಕೆಟ್ ಪಡೆದು ಮಿಂಚಿದರು.

- Advertisment -

Most Popular