Home ಕ್ರೈಂ ಸುದ್ದಿ ಕೆಲಸ ಕೊಡಿಸುವುದಾಗಿ 500 ಮಂದಿಗೆ ವಂಚನೆ:ಕೆಎಸ್ಸಾರ್ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಕೆಲಸ ಕೊಡಿಸುವುದಾಗಿ 500 ಮಂದಿಗೆ ವಂಚನೆ:
ಕೆಎಸ್ಸಾರ್ಟಿಸಿ ಚಾಲಕ ಸೇರಿ ಇಬ್ಬರ ಬಂಧನ

ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ 500 ಮಂದಿಗೆ ವಂಚನೆ ಮಾಡಿದ್ದ ಕೆಎಸ್ಆರ್’ಟಿಸಿ ಚಾಲಕ ಸೇರಿ ಇಬ್ಬರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

- Advertisement -

ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್‌ ಬಿಲ್ಲಾ ನಾಯಕ್‌ (49) ಹಾಗೂ ಆತನ ಸ್ನೇಹಿತ ಅನಿಲ್‌ (38) ಬಂಧಿತರಾಗಿದ್ದಾರೆ.

- Advertisement -

ಆರೋಪಿಗಳು ಸುಮಾರು 500ಕ್ಕೂ ಅಧಿಕ ಮಂದಿಗೆ ಸುಮಾರು 15-18 ಕೋಟಿ ರೂ. ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಆದರೆ, ಆತನ ಖಾತೆ ಪರಿಶೀಲಿಸಿದಾಗ ಸುಮಾರು 2.5 ಕೋಟಿ ರೂ. ಹಣ ಇರುವುದು ಪತ್ತೆಯಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -
- Advertisment -

Most Popular