Home ಅಂತಾರಾಷ್ಟ್ರೀಯ ಬಾಲಿ ದ್ವೀಪದಲ್ಲಿ ಸರಣಿ ಭೂಕಂಪನ:ಮೂವರು ಮೃತ್ಯು, 7 ಮಂದಿಗೆ ಗಾಯ

ಬಾಲಿ ದ್ವೀಪದಲ್ಲಿ ಸರಣಿ ಭೂಕಂಪನ:
ಮೂವರು ಮೃತ್ಯು, 7 ಮಂದಿಗೆ ಗಾಯ

ಡೆನ್ಪಾಸರ್‌, ಇಂಡೊನೇಷ್ಯಾ: ಇಂಡೊನೇಷ್ಯಾದ ಬಾಲಿ ದ್ವೀಪದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಎರಡು ಸರಣಿ ಭೂಕಂಪನದಲ್ಲಿ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

- Advertisement -

‘ಭೂಕಂಪನದಿಂದ ಗುಡ್ಡ ಪ್ರದೇಶದ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದು ಮೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ’ ಎಂದು ದ್ವೀಪದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಗೆಡೆ ದರ್ಮದಾ ಹೇಳಿದರು.

- Advertisement -

‘ಭೂಕಂಪನದಲ್ಲಿ ಸಂಭವಿಸಿದ ಹಾನಿ ಮತ್ತು ಸಾವು– ನೋವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೂಳೆ ಮುರಿತ ಮತ್ತು ತಲೆಗೆ ಪೆಟ್ಟು ಬಿದ್ದಿರುವಂತಹ ಗಾಯಗಳಾಗಿವೆ’ ಎಂದು ದ್ವೀಪದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಗೆಡೆ ದರ್ಮದಾ ಹೇಳಿದರು.

- Advertisement -

ಬೆಳಕು ಮೂಡುವ ಮುನ್ನವೇ ಭೂಮಿ ಕಂಪಿಸಿದೆ. ಇದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿಹೋಗಿದ್ದಾರೆ. ಕೋವಿಡ್‌ ಪಿಡುಗು ಕಡಿಮೆಯಾಗುತ್ತಿದ್ದಂತೆ ದ್ವೀಪ ರಾಷ್ಟ್ರವು ತನ್ನ ಪ್ರವಾಸೋದ್ಯಮವನ್ನು ಮತ್ತೆ ಪ್ರಾರಂಭಿಸುತ್ತಿರುವ ಹೊತ್ತಿನಲ್ಲೇ ಈ ದುರಂತ ಸಂಭವಿಸಿದೆ.

- Advertisment -

Most Popular