Home ನಮ್ಮ ಕರಾವಳಿ 'ಪ್ರತಿದಿನ' ಮಕ್ಕಳ ಜಾಲ; ...

‘ಪ್ರತಿದಿನ’ ಮಕ್ಕಳ ಜಾಲ; ‘ಲಾಕ್ ಡೌನ್’ ಕೌಂಟ್ ಡೌನ್..! ಚಿಣ್ಣರ ಪ್ರತಿಭೆಗೆ ಯೂಟ್ಯೂಬ್ ವೇದಿಕೆ; ನಿಮ್ಮ ಮಗುವಿನ ಜ್ಞಾನಕ್ಕೆ ‘ಪ್ರತಿದಿನ’ದ ಪರದೆ

ಕೊರೊನಾ ವ್ಯಾಪಕವಾಗಿ ಹರಡುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಎಲ್ಲರೂ ಮನೆಯಲ್ಲಿ ಇದ್ದಾರೆ. ಅದರಲ್ಲೂ ಶಾಲಾ ಮಕ್ಕಳು ಕೂಡಾ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಮಕ್ಕಳು ಮನೆಯಲ್ಲಿಯೇ ಇದ್ದುಕೊಂಡೇ ತಮ್ಮ ಪ್ರತಿಭೆಯನ್ನು ತೋರಿಸಲು “ಪ್ರತಿದಿನ” ಮೀಡಿಯಾ ಟೀಮ್ ಒಂದು ವೇದಿಕೆ ಕಲ್ಪಿಸಿದೆ.

- Advertisement -

1 ರಿಂದ 6 ವರ್ಷ ಹಾಗೂ 7 ರಿಂದ 12 ವರ್ಷದ ಎರಡು ವಿಭಾಗಕ್ಕೆ ಆನ್ ಲೈನ್ ಸ್ಪರ್ಧೆ (ಹುಡುಗರು, ಹುಡುಗಿಯರು ಭಾಗವಹಿಸಬಹುದು, ಒಂದು ಸ್ಪರ್ಧೆ ಒಬ್ಬರಿಗೆ ಸೀಮಿತ. ಗುಂಪು ಸ್ಪರ್ಧೆಗೆ ಅವಕಾಶವಿಲ್ಲ.)

- Advertisement -

ಹಾಡು ಮತ್ತು ಭಾಷಣ ಸ್ಪರ್ಧೆ: ಯಾವುದೇ ವಿಷಯವಾದರೂ ಸರಿ. ಒಬ್ಬರು ಎರಡೂ ಸ್ಪರ್ಧೆಯಲ್ಲೂ ಭಾಗವಹಿಸಬಹುದು. ಗರಿಷ್ಠ ಒಂದು ನಿಮಿಷದ ಭಾಷಣ ಮತ್ತು ಗರಿಷ್ಟ ಮೂರು ನಿಮಿಷದ ಹಾಡು ಹಾಡುವ ವೀಡಿಯೋ ಮಾಡಿ ನಮ್ಮ ವಾಟ್ಸಾಪ್ ಸಂಖ್ಯೆ 7411272248 ಗೆ ವಾಟ್ಸಾಪ್ ಮಾಡಬೇಕು. ಅತೀ ಹೆಚ್ಚು ಲೈಕ್, ವೀಕ್ಷಣೆ, ಮತ್ತು ವೀಡಿಯೋ ಕ್ವಾಲಿಟಿ, ಮಕ್ಕಳ ಪ್ರತಿಭೆ ಮೊದಲಾದವುಗಳನ್ನು ಪರಿಗಣಿಸಿ ಅಯ್ಕೆ ಮಾಡಲಾಗುವುದು. ಸಾಮಾಜಿಕ ಕಳಕಳಿಯ ಭಾಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು.‌

- Advertisement -

ವಿಜೇತ ಅಭ್ಯರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ಆಕರ್ಷಕ ಬಹುಮಾನಗಳಿವೆ. ಜೂನ್ 10ರ ಒಳಗಡೆ ವೀಡಿಯೋ ಕಳಿಸತಕ್ಕದು.

ವಿ.ಸೂ:

  1. ಭಾಷಣ ಸ್ಪರ್ದೆಗೆ ತಾವು ಕಳಿಸುವ ವೀಡಿಯೋಗಳು ಒಂದು ನಿಮಿಷಕ್ಕೆ‌ ಸೀಮಿತವಾಗಿರಬೇಕು.‌ ಅದಕ್ಕಿಂತ ಹೆಚ್ಚು ಸಮಯದ ವೀಡಿಯೋವನ್ನು ಪರಿಗಣನೆ ತೆಗೆದುಕೊಳ್ಳುವುದಿಲ್ಲ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಾಗಿರಬೇಕು.
  2. ವೀಡಿಯೋದ ಜತೆಗೆ ಸ್ಪರ್ಧಿಗಳ ಆಧಾರ್ ಕಾರ್ಡ್ ಪ್ರತಿ ಕಳಿಸಬೇಕು(ವಯೋಮಾನ ದೃಢಪಡಿಸಲು)
  3. ವೀಡಿಯೋ ಕಳಿಸಲು ಕೊನೆಯ ದಿನಾಂಕ ಜೂ.10
  4. ವೀಡಿಯೋದ ಜತೆಗೆ ಸ್ಪರ್ಧಿಯ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಹೆಸರು ಕಡ್ಡಾಯವಾಗಿ ನಮೂದಿಸಬೇಕು.
  5. ಹಾಡು ಸ್ಪರ್ಧೆ ಮೂರು ನಿಮಿಷಕ್ಕೆ ಸೀಮಿತವಾಗಿರಲಿ. ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಾಗಿರಬೇಕು.
  6. ಭಾಗವಹಿಸುವರು ನಮ್ಮ ಚಾನೇಲ್ subscribe ಮಾಡಿರಬೇಕು.
- Advertisment -

Most Popular