Home ಕ್ರೈಂ ಸುದ್ದಿ ಕಾಸರಗೋಡು: ತಾಯಿ, 2 ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ತಾಯಿ, 2 ವರ್ಷದ ಮಗುವಿನ ಮೃತದೇಹ ಬಾವಿಯಲ್ಲಿ ಪತ್ತೆ

ಕಾಸರಗೋಡು: ಎರಡೂವರೆ ವರ್ಷದ ಮಗು ಮತ್ತು ತಾಯಿಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ನೀಲೇಶ್ವರ ದಲ್ಲಿ ನಡೆದಿದೆ. ನೀಲೇಶ್ವರ ಕಡಿಂಙಮೂಲೆಯ ರಮ್ಯಾ (34) ಹಾಗೂ ಹೆಣ್ಣು ಮಗುವಿನ ಮೃತ ದೇಹ ಮನೆಯ ಸಮೀಪದ ಹಿತ್ತಿಲಿನಲ್ಲಿರುವ ಬಾವಿಯಲ್ಲಿ ಅ.18ರ ಸೋಮವಾರ ಇಂದು ಬೆಳಿಗ್ಗೆ ಪತ್ತೆಯಾಗಿದೆ.

- Advertisement -

ಇಬ್ಬರೂ ಭಾನುವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಇದರಿಂದ ಮನೆಯವರು ಹಾಗೂ ಸ್ಥಳೀಯರು ಶೋಧ ನಡೆಸಿದ್ದರು. ಈ ನಡುವೆ ಮನೆ ಸಮೀಪದ ಬಾವಿಯಲ್ಲಿ ಇಂದು ಬೆಳಿಗ್ಗೆ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಕಾಙಂಗಾಡ್ ನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ

- Advertisement -

ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ರಮ್ಯಾ ಕೆಲ ಸಮಯದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೂಲತ: ಕೊಲ್ಲಂ ನಿವಾಸಿಯಾಗಿರುವ ಪ್ರತೀಷ್ ಪತಿಯಾಗಿದ್ದು, ನೀಲೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisment -

Most Popular