Home ನಮ್ಮ ರಾಜ್ಯ ಮತ್ತೆ ದುಬಾರಿಯಾದ ಎಲ್ ಪಿಜಿ ಗ್ಯಾಸ್: 15 ರೂ. ಏರಿಕರ

ಮತ್ತೆ ದುಬಾರಿಯಾದ ಎಲ್ ಪಿಜಿ ಗ್ಯಾಸ್: 15 ರೂ. ಏರಿಕರ

ನವದೆಹಲಿ: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರದಲ್ಲಿ ಬುಧವಾರ ಮತ್ತೆ ಏರಿಕೆಯಾಗಿದೆ. ಈಗ ಎಲ್‌ಪಿಜಿ ದರ ರೂ. 15ರಷ್ಟು ಹೆಚ್ಚಳ ಮಾಡುವ ಮೂಲಕ ಪ್ರತಿ ಸಿಲಿಂಡರ್‌ ಬೆಲೆ ರೂ. 900 ಸಮೀಪಿಸಿದೆ.ಎರಡು ತಿಂಗಳಲ್ಲಿ ಇದು ನಾಲ್ಕನೇ ಸತತ ದರ ಹೆಚ್ಚಳವಾಗಿದೆ.

- Advertisement -

ಹೊಸ ಏರಿಕೆಯ ನಂತರ, ಈಗ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪ್ರತಿ ಸಿಲಿಂಡರ್‌ಗೆ ರೂ 884.50 ರಿಂದ ರೂ 899.50 ಕ್ಕೆ ಏರಿಕೆಯಾಗಿದೆ.5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗೆ ₹502 ಆಗಿದ್ದು, ಇವತ್ತಿನಿಂದಲೇ ಹೊಸ ದರ ಅನ್ವಯವಾಗಿದೆ.ಮಂಗಳವಾರ ಇಂಧನ ದರ ಏರಿಕೆಯಾದ ಬೆನ್ನಲ್ಲೇ ಅನಿಲ ದರದಲ್ಲೂ ಹೆಚ್ಚಳವಾಗಿದೆ.

- Advertisement -
- Advertisment -

Most Popular