Home ಗಲ್ಫ್ ವಾರ್ತೆ ಒಮಾನ್: ಸಮುದ್ರದಲ್ಲಿ ಮುಳುಗಿ ಉಳ್ಳಾಲದ ಇಬ್ಬರು ಮೃತ್ಯು

ಒಮಾನ್: ಸಮುದ್ರದಲ್ಲಿ ಮುಳುಗಿ ಉಳ್ಳಾಲದ ಇಬ್ಬರು ಮೃತ್ಯು

ಮಂಗಳೂರು: ಒಮಾನ್ ನಲ್ಲಿ ಉದ್ಯೋಗದಲ್ಲಿದ್ದ ಉಳ್ಳಾಲದ ಇಬ್ಬರು ವ್ಯಕ್ತಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

- Advertisement -

ಉಳ್ಳಾಲದ ರಿಝ್ವಾನ್ ಅಳೆಕಲ ಹಾಗೂ ಉಳ್ಳಾಲ ಕೋಡಿಯ ಝಹೀರ್ ಮೃತಪಟ್ಟವರು. ಫಿಶ್ ಮಿಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಅಲ್ಲಿನ ಸಮುದ್ರತೀರಕ್ಕೆ ಸಂಜೆ ವೇಳೆ ವಿಹಾರಕ್ಕೆಂದು ತೆರಳಿದ್ದರು. ರಿಝ್ವಾನ್ ನೀರಿನಲ್ಲಿ ಮುಳುಗುತ್ತಿದ್ದಾಗ ರಕ್ಷಿಸಲೆಂದು ಝಹೀರ್ ತೆರಳಿದ್ದರು. ಝಹೀರ್ ಅವರ ಮೃತದೇಹ ಪತ್ತೆಯಾಗಿದ್ದು, ರಿಝ್ವಾನ್ ಮೃತದೇಹಕ್ಕಾಗಿ ಶೋಧ ಮುಂದುವರೆದಿದೆ.

- Advertisement -
- Advertisment -

Most Popular