Home ಕಾನೂನು ಮಾಹಿತಿ ಲಖಿಂಪುರ ಖೇರಿ ಹಿಂಸಾಚಾರ ಖಂಡಿಸಿ ರೈತರಿಂದ ರೈಲ್ ರೋಕೋ ಪ್ರತಿಭಟನೆ

ಲಖಿಂಪುರ ಖೇರಿ ಹಿಂಸಾಚಾರ ಖಂಡಿಸಿ ರೈತರಿಂದ ರೈಲ್ ರೋಕೋ ಪ್ರತಿಭಟನೆ

ದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವತಿಯಿಂದ ರೈಲ್ ರೋಕೋ ಪ್ರತಿಭಟನೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತು. ಪ್ರಸ್ತುತ ನಡೆಯುತ್ತಿದೆ ಲಖಿಂಪುರ್ ಖೇರಿ ಹಿಂಸಾಚಾರದ ಕುರಿತು ಗೃಹ ಸಚಿವ ಅಜಯ್ ಮಿಶ್ರಾ ತೆನಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೆಳಗಿಳಿಸಲು ಒತ್ತಾಯಿಸುತ್ತಿದ್ದು, ಇದರಲ್ಲಿ ಆತನ ಮಗ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದಾನೆ.

- Advertisement -

ಈ ಬಗ್ಗೆ ಎಸ್ಕೆಎಂ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶಾದ್ಯಂತ ರೈತ ಸಂಘಟನೆಗಳು ಬೆಳಗ್ಗೆ 10ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಅಂದರೆ ಸುಮಾರು 6ತಾಸು ರೈಲು ತಡೆ ನಡೆಸಬೇಕು. ಆದರೆ ಪ್ರತಿಭಟನೆ ಶಾಂತಿಯುತವಾಗಿ ನಡೆಯಬೇಕು. ರೈಲ್ವೆ ಇಲಾಖೆಯ ಆಸ್ತಿಗೆ ಯಾವುದೇ ಹಾನಿಯಾಗಬಾರದು ಎಂದು ತಿಳಿಸಿದೆ.

- Advertisement -

ಅಕ್ಟೋಬರ್ 3 ರಂದು ಆಶಿಶ್ ಮಿಶ್ರಾ ಅವರು ರೈತರು ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ತನ್ನ ಕಾರು ಚಲಾಯಿಸಿದ ಪರಿಣಾಮವಾಗಿ ನಾಲ್ಕು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಎಸ್ಕೆಎಂ ಆರೋಪಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಸ್ಥಳೀಯ ಪತ್ರಕರ್ತ ಕೂಡ ಸೇರಿದ್ದಾರೆ.

- Advertisement -

ಆದರೆ ಅಜಯ್ ಮಿಶ್ರಾ ತನ್ನ ತಪ್ಪನ್ನು ನಿರಾಕರಿಸಿದ್ದಾರೆ ಮತ್ತು ಘಟನೆ ನಡೆದಾಗ ಅವರ ಮಗ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

- Advertisment -

Most Popular