Home ಅಂತಾರಾಷ್ಟ್ರೀಯ ಹಾಂಗ್‌ಕಾಂಗ್‌ನಲ್ಲಿ ಕೊಂಪಾಸು ಚಂಡಮಾರುತ:ಶಾಲೆ, ಸರ್ಕಾರಿ ಸೇವೆಗಳು ಸ್ಥಗಿತ

ಹಾಂಗ್‌ಕಾಂಗ್‌ನಲ್ಲಿ ಕೊಂಪಾಸು ಚಂಡಮಾರುತ:
ಶಾಲೆ, ಸರ್ಕಾರಿ ಸೇವೆಗಳು ಸ್ಥಗಿತ

ಬೀಜಿಂಗ್: ಕೊಂಪಾಸು ಚಂಡಮಾರುತ ಕಾರಣ ಹಾಂಗ್‌ಕಾಂಗ್‌ನಲ್ಲಿ ಬುಧವಾರ ಶಾಲೆಗಳನ್ನು ಮುಚ್ಚಲಾಗಿದ್ದು, ಷೇರು ಮಾರುಕಟ್ಟೆ ಹಾಗೂ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

- Advertisement -

ಹಾಂಗ್‌ಕಾಂಗ್‌ ನಗರದ ದಕ್ಷಿಣ ಭಾಗದ ಮೂಲದ ಚಂಡಮಾರುತ ಹಾಯ್ದು ಹೋಗಿದೆ. ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜನರು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.

- Advertisement -

ಗಂಟೆಗೆ 83 ಕಿ.ಮೀ. ವೇಗದೊಂದಿಗೆ ಚಂಡಮಾರುತ ಸಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳುತ್ತಿರುವ ಚಂಡಮಾರುತ ಗಂಟೆಗೆ 101 ಕಿ.ಮೀ. ವೇಗದೊಂದಿಗೆ ಮುನ್ನುಗ್ಗುತ್ತಿದೆ ಎಂದು ಹಾಂಗ್‌ಕಾಂಗ್‌ ಹವಾಮಾನ ಕೇಂದ್ರ ತಿಳಿಸಿದೆ.

- Advertisement -

ದಕ್ಷಿಣ ಚೀನಾ ಸಮುದ್ರದ ಉತ್ತರ ಭಾಗದ ಮೂಲಕ, ಚೀನಾದ ಹೈನಾನ್‌ ಪ್ರಾಂತ್ಯದತ್ತ ಚಂಡಮಾರುತ ಸಾಗುವ ನಿರೀಕ್ಷೆ ಇದೆ. ನಂತರ ವಿಯೆಟ್ನಾಂನ ಉತ್ತರ ಭಾಗದಲ್ಲಿ ನೆಲಸ್ಪರ್ಶ ಮಾಡುವುದು ಎಂದು ಹವಾಮಾನ ಕೇಂದ್ರ ತಿಳಿಸಿದೆ.

- Advertisment -

Most Popular