Home ಕ್ರೀಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 4 ವಿಕೆಟ್ ಗಳ ಜಯ

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 4 ವಿಕೆಟ್ ಗಳ ಜಯ

ದುಬೈ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ಲೇ ಆಫ್ ಪಂದ್ಯದಲ್ಲಿ‌ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ವಿಕೆಟ್ ಗಳ ಗೆಲುವು ಸಾಧಿಸುವುದರೊಂದಿಗೆ ತಂಡವು ಫೈನಲ್ ಪ್ರವೇಶಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳ ಗುರಿಯನ್ನು ನೀಡಿತು. ಆರಂಭಿಕ ಆಟಗಾರ ಪೃತ್ವಿ ಶಾ ಮತ್ತು ರಿಷಭ್ ಪಂತ್ ಆಕರ್ಷಕ ಅರ್ಧ ಶತಕದ ಬ್ಯಾಟಿಂಗ್ ಪ್ರದರ್ಶನ ದಿಂದ ಉತ್ತಮ ರನ್ ಗಳ ಕಲೆ ಹಾಕಿತು. ಪೃತ್ವಿ ಶಾ (60) ರಿಷಭ್ ಪಂತ್(51*) ಶಿಮ್ರೋನ್ ಹಿಟ್ಮೇಯರ್ (37) ಉತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನಡೆಸಿದರು.

- Advertisement -

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ಗಳಿಸಿ 4 ವಿಕೆಟ್ ಗಳ ಜಯ ಸಾಧಿಸಿತು. ಎರಡನೇ ವಿಕೆಟ್ ಗೆ ರಾಬಿನ್ ಉತ್ತಪ್ಪ ಮತ್ತು ರುತುರಾಜ್ ಗೈಕ್ವಾಡ್ 113 ರನ್ ಗಳನ್ನು ಕಲೆ ಹಾಕುವ ಮೂಲಕ ತಂಡದ ಗೆಲುವಿನ ಆಸರೆಯಾದರು. ರಾಬಿನ್ ಉತ್ತಪ್ಪ (63) ರುತುರಾಜ್ ಗೈಕ್ವಾಡ್ (70) ಎಮ್.ಎಸ್ ಧೋನಿ (18*) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

- Advertisement -

ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಜೋಶ್ ಹೇಝಲ್ ವುಡ್ 2, ಮೊಯಿನ್ ಅಲಿ, ರವೀಂದ್ರ ಜಡೇಜ, ಡಿ.ಜೆ ಬ್ರಾವೋ ತಲಾ 1 ವಿಕೆಟ್ ಪಡೆದು ಗೆಲುವಿನ ಪ್ರದಾನ ಪಾತ್ರ ವಹಿಸಿದರು.

- Advertisment -

Most Popular