Home ಗಲ್ಫ್ ವಾರ್ತೆ ದುಬೈ: ಗರ್ಭಿಣಿ ಬೆಕ್ಕನ್ನು ರಕ್ಷಿಸಿದ ನಾಲ್ವರಿಗೆ 40 ಲಕ್ಷ ಉಡುಗೊರೆ ನೀಡಿದ ಶೈಖ್ ಮುಹಮ್ಮದ್ ಬಿನ್...

ದುಬೈ: ಗರ್ಭಿಣಿ ಬೆಕ್ಕನ್ನು ರಕ್ಷಿಸಿದ ನಾಲ್ವರಿಗೆ 40 ಲಕ್ಷ ಉಡುಗೊರೆ ನೀಡಿದ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್

ದುಬೈ: ಯುಎಇ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ದುಬೈ ದೇರಾದಲ್ಲಿ ಕಟ್ಟಡದ ಮೇಲೆ ಸಿಕ್ಕಿಬಿದ್ದ ಗರ್ಭಿಣಿ ಬೆಕ್ಕನ್ನು ಕೆಳಕ್ಕೆ ಇಳಿಸಿದ ಮಲಯಾಳಿಗಳು ಸೇರಿದಂತೆ ನಾಲ್ಕು ಜನರಿಗೆ ಎರಡು ಲಕ್ಷ ದಿರ್ಹಮ್ (ರೂ. 40 ಲಕ್ಷ) ಉಡುಗೊರೆ ನೀಡಿ ಗೌರವಿಸಿದ್ದಾರೆ.

- Advertisement -

ಗುರುವಾರ ರಾತ್ರಿ ಅವರ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ತಲಾ 50,000 ದಿರ್ಹಮ್ (ರೂ. 10 ಲಕ್ಷ) ನೀಡಿದರು. ಕೋಝಿಕೋಡ್ ವಡಗರ ಪುರಮೇರಿಯ ಅಬ್ದುಲ್ ರಶೀದ್, ಆರ್‌ಟಿಎ ಚಾಲಕ ಕೋದಮಂಗಲಂ ನಾಸಿರ್ ಮೊಹಮ್ಮದ್, ಮೊರೊಕ್ಕೊದ ಅಶ್ರಫ್ ಮತ್ತು ಪಾಕಿಸ್ತಾನದ ಅತಿಫ್ ಮಹಮೂದ್ ಉಡುಗೊರೆಯನ್ನು ಸ್ವೀಕರಿಸಿದರು.

- Advertisement -

ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದುಬೈ ದೇರಾ ಅಲ್ ಮಾರಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಟ್ಟಡದ ಎರಡನೇ ಮಹಡಿಯಲ್ಲಿ ಬೆಕ್ಕು ಸಿಕ್ಕಿಬಿದ್ದಿದೆ. ಒಳಗೆ ಮತ್ತು ಹೊರಗೆ ಹೋಗಲು ಸಾಧ್ಯವಾಗದೆ ಬೆಕ್ಕು ಹೆಣಗಾಡುತ್ತಿತ್ತು. ಕೂಡಲೇ ಈ ನಾಲ್ವರು ಯುವಕರು ಕೆಳಗಡೆ ಬಟ್ಟೆಯನ್ನು ಹಿಡಿದಿದ್ದು, ನಿಖರವಾಗಿ ಬಟ್ಟೆಯ ಮೇಲೆ ಬಿದ್ದ ಬೆಕ್ಕು ಯಾವುದೇ ಅಪಾಯವಿಲ್ಲದೆ ಪಾರಾಯಿತು.

- Advertisement -

ಈ ಘಟನೆಯನ್ನು ರಶೀದ್ ಕ್ಯಾಮರಾದಲ್ಲಿ ಸೆರೆಹಿಡಿದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಈ ವಿಡಿಯೋ ಜೊತೆಗೆ ಅಭಿನಂದನಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.

‘ನಮ್ಮ ಸುಂದರ ನಗರದಲ್ಲಿ ಈ ರೀತಿಯ ಮಾನವೀಯ ಕೆಲಸವನ್ನು ನೋಡಿ ನಮಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ. “ರಹಸ್ಯ ವೀರರನ್ನು ಗುರುತಿಸುವವರು ದಯವಿಟ್ಟು ಸಹಾಯ ಮಾಡಿ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಶೈಖ್ ಮುಹಮ್ಮದ್ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಂತರ, ಅಧಿಕಾರಿಗಳು ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದರು. ಬೆಕ್ಕಿಗೆ ಯಾವುದೇ ಗಾಯವಾಗಿಲ್ಲ ಆದರೂ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ ಅಧಿಕಾರಿಗಳ ತಂಡ ಖುದ್ದಾಗಿ ಈ ವೀರರನ್ನು ಭೇಟಿ ಮಾಡಿ ಉಡುಗೊರೆ ನೀಡಿತು. ದುಬೈ ಆಡಳಿತಗಾರನ ಉಡುಗೊರೆಯನ್ನು ಸ್ವೀಕರಿಸಲು ಬಹಳ ಸಂತೋಷವಾಗಿದೆ ಎಂದು ಹೇಳಿದರು. ಮನೆಯಲ್ಲಿ ಮೂರು ಬೆಕ್ಕುಗಳನ್ನು ಸಾಕುತ್ತಿರುವ ನಾಸಿರ್, ಸಾಕುಪ್ರಾಣಿಗಳ ಮೇಲಿನ ಪ್ರೀತಿಯಿಂದ ತಾನು ಪ್ರೇರಣೆಗೊಂಡಿದ್ದೇನೆ ಎಂದು ಹೇಳಿದರು. ರಶೀದ್, ದಿನಸಿ ಅಂಗಡಿ ನಡೆಸುತ್ತಿದ್ದು, ಅವರ ಅಂಗಡಿಯ ಎದುರುಗಡೆ ಈ ಘಟನೆ ನಡೆದಿದೆ.

- Advertisment -

Most Popular