Home ನಮ್ಮ ಕರಾವಳಿ ಮಂಗಳೂರು:ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಓರ್ವನ ಬಂಧನ

ಮಂಗಳೂರು:ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಓರ್ವನ ಬಂಧನ

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಓರ್ವನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

- Advertisement -

ಕಾಸರಗೋಡು ಮುಳಿಯಾರ್ ನಿವಾಸಿ ಮುಹಮ್ಮದ್ ನವಾಝ್ ಎಂಬಾತನನ್ನು ಅಧಿಕಾರಿಗಳು ವಶಕ್ಕೆ ಪಡೆದಿಕೊಂಡಿದ್ದಾರೆ.ಸ್ಕೇಟಿಂಗ್ ಬೋರ್ಡ್ ಮತ್ತು ಅದರ ಚಕ್ರಕ್ಕೆ ಸಂಪರ್ಕ ಕಲ್ಪಿಸುವ ರಾಡ್ ಒಳಗಡೆ ಅಡಗಿಸಿಟ್ಟು ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಈತ ಯತ್ನಿಸಿದ್ದ.

- Advertisement -

ನವಾಝ್ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದಿದ್ದು,ತಪಾಸಣೆ ವೇಳೆ ತೆರಿಗೆ ವಂಚಸಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿತ್ತು.ತಕ್ಷಣವೇ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದರು.

- Advertisement -

ಆರೋಪಿಯಿಂದ ಸುಮಾರು 16,21,400 ರೂ ಮೌಲ್ಯದ 335 ಗ್ರಾಂ ಚಿನ್ನವನ್ನು ವಶ ಪಡೆಯಲಾಗಿದೆ.

- Advertisment -

Most Popular