Home ಕ್ರೀಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 8 ವಿಕೆಟ್ ಗಳ ಜಯ

ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 8 ವಿಕೆಟ್ ಗಳ ಜಯ

ಶಾರ್ಜ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 51 ನೇ ಪಂದ್ಯದಲ್ಲಿ‌ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್ ಗಳ ಗೆಲುವು ಸಾಧಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಗಳ ಗುರಿಯನ್ನು ನೀಡಿತು. ಎವಿನ್ ಲೆವಿಸ್‌ (24) ಡೇವಿಡ್ ಮಿಲ್ಲರ್ (15) ಅಗ್ರ ಸ್ಕೋರರ್ ಎನಿಸಿಕೊಂಡರೆ, ಆಟಗಾರರ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನದಿಂದ ರನ್ ಗಳಿಸುವಲ್ಲಿ ವಿಫಲರಾದರು.

- Advertisement -

ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ಗಳಿಸಿ 8 ವಿಕೆಟ್ ಗಳ ಜಯ ಸಾಧಿಸಿತು. ರೋಹಿತ್ ಶರ್ಮಾ(22) ಸೂರ್ಯ ಕುಮಾರ್ ಯಾದವ್ (13) ಇಶಾನ್ ಕಿಶಾನ್ ( 50*) ಹಾರ್ದಿಕ್ ಪಾಂಡ್ಯ (5*) ಉತ್ತಮ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದರು.

- Advertisement -

ಮುಂಬೈ ಇಂಡಿಯನ್ಸ್ ಪರವಾಗಿ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಕುಲ್ಟರ್ ನೈಲ್ 4, ಜೇಮ್ಸ್ ನೀಶಮ್ 3, ಜಸಪ್ರಿತ್ ಬುಮ್ರ 2 ವಿಕೆಟ್ ಪಡೆದು ಗೆಲುವಿನ ಪ್ರದಾನ ಪಾತ್ರ ವಹಿಸಿದರು.

- Advertisment -

Most Popular