Home ನಮ್ಮ ರಾಜ್ಯ ಲಾಕ್ಡೌನ್ ನಿಂದ ತೊಂದರೆಗೊಳಗಾದವರಿಗೆ ಗುಡ್ ನ್ಯೂಸ್: ಜೂ. 7 ರ ನಂತರ ಅನ್ಲಾಕ್ ಬಗ್ಗೆ ಸಿಎಂ...

ಲಾಕ್ಡೌನ್ ನಿಂದ ತೊಂದರೆಗೊಳಗಾದವರಿಗೆ ಗುಡ್ ನ್ಯೂಸ್: ಜೂ. 7 ರ ನಂತರ ಅನ್ಲಾಕ್ ಬಗ್ಗೆ ಸಿಎಂ ಸುಳಿವು

ಬೆಂಗಳೂರು: ರಾಜ್ಯದಲ್ಲಿ ಜೂನ್ 7 ರವರೆಗೆ ಲಾಕ್ಡೌನ್ ಜಾರಿಯಲ್ಲಿದ್ದು, ನಂತರದಲ್ಲಿಯೂ ಲಾಕ್ ಡೌನ್ ಮುಂದುವರಿಸಬೇಕೇ? ಬೇಡವೇ? ಎಂಬುದರ ಬಗ್ಗೆ ಪರಿಸ್ಥಿತಿ ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಜೂನ್ 30 ರವರೆಗೆ ಕಟ್ಟುನಿಟ್ಟಿನ ನಿರ್ಬಂಧ ಮುಂದುವರೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಇದೇ ವೇಳೆ ಲಾಕ್ ಡೌನ್ ಸಡಿಲಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಅನೇಕ ಸಚಿವರು ಕೂಡ ಈಗಾಗಲೇ ಎರಡು ತಿಂಗಳು ಲಾಕ್ ಡೌನ್ ಮಾಡಿರುವುದರಿಂದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಹಾಗಾಗಿ ಜೂನ್ 7 ರ ನಂತರ ನಿರ್ಬಂಧ ಸಡಿಲ ಮಾಡಬೇಕೆಂದು ಹೇಳಿದ್ದಾರೆ.

ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ ಅವರು, ಜನರು ಸಹಕರಿಸಿ ಸೋಂಕು ತಗ್ಗಿದರೆ ಲಾಕ್ಡೌನ್ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ.

- Advertisement -

ಜನರು ಸಹಕರಿಸಿದರೆ ಲಾಕ್ಡೌನ್ ವಿಸ್ತರಣೆ ಪ್ರಶ್ನೆಯೇ ಉದ್ಭವಿಸಲ್ಲ. ಅನ್ಲಾಕ್ ಅಥವಾ ಲಾಕ್ ಡೌನ್ ಭವಿಷ್ಯ ಜನರ ಕೈಯಲ್ಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಪಾಸಿಟಿವಿಟಿ ತರ ಶೇಕಡ 7 ಕ್ಕಿಂತ ಕಡಿಮೆಯಾದ ನಂತರ ಸಡಿಲಿಕೆ ಮಾಡಬಹುದು. ಪಾಸಿಟಿವಿಟಿ ದರ ಹೆಚ್ಚಾದರೆ ಲಾಕ್ಡೌನ್ ವಿಸ್ತರಣೆ ಆಗಬಹುದು ಎನ್ನಲಾಗಿದೆ.

- Advertisement -
- Advertisment -

Most Popular