Home ರಾಷ್ಟ್ರೀಯ ಉತ್ತರ ಪ್ರದೇಶ: ಟ್ರಾಕ್ಟರ್ ಅಪಘಾತ:4 ಮಕ್ಕಳು ಸೇರಿ 11 ಮಂದಿ ಮೃತ್ಯು

ಉತ್ತರ ಪ್ರದೇಶ: ಟ್ರಾಕ್ಟರ್ ಅಪಘಾತ:
4 ಮಕ್ಕಳು ಸೇರಿ 11 ಮಂದಿ ಮೃತ್ಯು

ಲಖ್ನೌ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶುಕ್ರವಾರ ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಉರುಳಿಬಿದ್ದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ದಾರಿಯಲ್ಲಿ ಅಡ್ಡ ಬಂದ ಪ್ರಾಣಿಯೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ತುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಮಧ್ಯಪ್ರದೇಶದ ಪಾಂಡೋಖರ್‌ನಿಂದ ಬಂದ ಸುಮಾರು 30 ಕುಟುಂಬಗಳು ಟ್ರಾಕ್ಟರ್ ಟ್ರಾಲಿಯಲ್ಲಿ ಎರಚ್‌ನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶಿವಹರಿ‌ ಮೀನಾ ತಿಳಿಸಿದ್ದಾರೆ.

- Advertisement -

ಅಪಘಾತದಲ್ಲಿ ನಾಲ್ಕು ಮಕ್ಕಳು ಮತ್ತು ಏಳು ಮಹಿಳೆಯರು ಸಾವಿಗೀಡಾಗಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಮೃತರನ್ನು ಪುಷ್ಪ ದೇವಿ (40), ಮುನ್ನಿ ದೇವಿ (40), ಸುನಿತಾ ಬಾಯಿ (35), ಪೂಜಾ ದೇವಿ (25), ರಜ್ಜೋ ಬಾಯಿ (45), ಪ್ರೇಮಾವತಿ (50), ಕುಸುಮಾ (55), ಕೃಷ್ಣ (10), ಪರಿ (1), ಅನುಷ್ಕಾ (4) ಮತ್ತು ಅವಿ (2) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisment -

Most Popular