Home ಕ್ರೈಂ ಸುದ್ದಿ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ

7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಅತ್ಯಾಚಾರ

ರಾಜಸ್ತಾನ: 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿದ ಘಟನೆ ರಾಜಸ್ತಾನದ ಜೈಪುರದ ಜಂಜುನಿ ಜಿಲ್ಲೆಯಲ್ಲಿ ನಡೆದಿದ್ದು, ಅತ್ಯಾಚಾರವೆಸಗಿ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಒಡ್ಡಿದ್ದಾನೆ.

- Advertisement -

ಸರ್ಕಾರಿ ಶಾಲೆಯೊಂದರ ಶಿಕ್ಷಕ ಅಕ್ಟೋಬರ್‌ 5ರಂದು ಏಳನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ತರಗತಿ ಮುಗಿದ ಬಳಿಕ ಕೆಲ ಕಾಲ ಇಲ್ಲೇ ಇರುವಂತೆ ವಿ‌ದ್ಯಾರ್ಥಿನಿಗೆ ಶಿಕ್ಷಕ ಹೇಳಿದ್ದು, ಗುರುಗಳ ಮಾತಿಗೆ ಬೆಲೆ ನೀಡಿ ವಿದ್ಯಾರ್ಥಿನಿ ಶಾಲೆಯಲ್ಲಿದ್ದಳು.

- Advertisement -

ಇದಕ್ಕೂ ಮುನ್ನ ಶಿಕ್ಷಕ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯ ಫೋನ್‌ಗೆ ಅಸಭ್ಯ ಫೋಟೋ, ವಿಡಿಯೋಗಳನ್ನು ಕಳುಹಿಸಿದ್ದನಂತೆ. ಈ ರೀತಿಯಾಗಿ ಮೆಸೇಜ್‌ ಮಾಡದಂತೆ ಶಿಕ್ಷಕನಿಗೆ ಹೇಳು ಬೆದರಿದ ವಿದ್ಯಾರ್ಥಿನಿ ಸುಮ್ಮನಾಗಿದ್ದಳು.

- Advertisement -

ಎಲ್ಲರೂ ಶಾಲೆಯಿಂದ ಹೊರಟ ಬಳಿಕ ಶಿಕ್ಷಕ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದು, ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ, ಆತ ಕಳುಹಿಸಿದ್ದ ಮೆಸೇಜ್‌ಗಳನ್ನು ಮೊಬೈಲ್‌‌ನಿಂದ ಡಿಲೀಟ್‌ ಮಾಡಿಸಿದ್ದಾನೆ.

- Advertisment -

Most Popular