Home ನಮ್ಮ ರಾಜ್ಯ ಬೆಂಗಳೂರಿನಲ್ಲಿರುವ 404 ಕಟ್ಟಡಗಳು ಯಾವುದೇ ಕ್ಷಣದಲ್ಲಿ ಕುಸಿಯಬಹುದು: ಬಿಬಿಎಂಪಿ ಎಚ್ಚರಿಕೆ

ಬೆಂಗಳೂರಿನಲ್ಲಿರುವ 404 ಕಟ್ಟಡಗಳು ಯಾವುದೇ ಕ್ಷಣದಲ್ಲಿ ಕುಸಿಯಬಹುದು: ಬಿಬಿಎಂಪಿ ಎಚ್ಚರಿಕೆ

ಬೆಂಗಳೂರು: ಶಿಥಿಲಗೊಂಡ ಕಟ್ಟಡಗಳು ಒಂದರ ಹಿಂದೆ ಒಂದರಂತೆ ಕುಸಿದು ಬೀಳುತ್ತಿರುವ ನಡುವೆ, ಯಾವುದೇ ಕ್ಷಣದಲ್ಲಿ ಕುಸಿಯಬಹುದಾದ 404 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ.

- Advertisement -

‘2019ರಲ್ಲಿ ನಡೆಸಿದ್ದ ಸರ್ವೆಯಲ್ಲಿ ಈ ರೀತಿಯ 185 ಕಟ್ಟಡಗಳನ್ನು ಪಾಲಿಕೆ ಗುರುತಿಸಿತ್ತು. ಹೊಸದಾಗಿ ಸರ್ವೆ ನಡೆಸಿ 15 ದಿನಗಳಲ್ಲಿ ವರದಿ ನೀಡಲು ಆದೇಶಿಸಲಾಗಿತ್ತು. ಅದರಂತೆ ಸಲ್ಲಿಕೆಯಾಗಿರುವ ಪ್ರಾಥಮಿಕ ವರದಿ ಪ್ರಕಾರ 404 ಕಟ್ಟಡಗಳು ಅಪಾಯದಲ್ಲಿರುವುದು ಗೊತ್ತಾಗಿದೆ’ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

- Advertisement -

‘ಪ್ರಾಥಮಿಕ ಸರ್ವೆಯಲ್ಲಿ ಇಷ್ಟು ಕಟ್ಟಡಗಳನ್ನು ಗುರುತಿಸಲಾಗಿದೆ. ಆ ಕಟ್ಟಡಗಳ ಸದೃಢತೆ ಬಗ್ಗೆ ಕೂಲಂಕಶ ಪರೀಕ್ಷೆ ನಡೆಸುವುದು ಇನ್ನೂ ಬಾಕಿ ಇದೆ’ ಎಂದು ಸರ್ವೆಯಲ್ಲಿ ಭಾಗಿಯಾಗಿದ್ದ ಪಾಲಿಕೆ ಎಂಜಿನಿಯರ್ ಒಬ್ಬರು ತಿಳಿಸಿದರು.

- Advertisement -

‘ಕಟ್ಟಡಗಳನ್ನು ಮೇಲ್ನೋಟಕ್ಕೆ ನೋಡಿ ಮತ್ತು ಅದು ನಿರ್ಮಾಣ ಆಗಿರುವ ವರ್ಷ ಆಧರಿಸಿ ಕುಸಿಯುವ ಹಂತದಲ್ಲಿರುವ ಕಟ್ಟಡ ಎಂದು ಗುರುತಿಸಲಾಗಿದೆ. ಈ ಎಲ್ಲ ಕಟ್ಟಡಗಳನ್ನು ತಜ್ಞ ಎಂಜಿನಿಯರ್‌ಗಳ ಮೂಲಕ ಅವುಗಳ ಸದೃಡತೆ ಬಗ್ಗೆ ಪರೀಕ್ಷೆ ನಡೆಸಲಾಗುವುದು. ಬಳಿಕವೇ ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ವಿವರಿಸಿದರು.

ಈ ಸರ್ವೆ ಪ್ರಕಾರ ದಕ್ಷಿಣ ವಲಯದಲ್ಲೇ ಅತೀ ಹೆಚ್ಚು 103 ಕಟ್ಟಡಗಳು, ಪಶ್ಚಿಮ ವಲಯದಲ್ಲಿ 95 ಕಟ್ಟಡಗಳಿವೆ. ವಿಶೇಷ ಎಂದರೆ 2019ರಲ್ಲಿ ನಡೆಸಿದ ಸರ್ವೆಯಲ್ಲಿ ಬೊಮ್ಮನಹಳ್ಳಿ ವಲಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಒಂದೇ ಒಂದು ಕಟ್ಟಡ ಇರಲಿಲ್ಲ. ಈಗ 9 ಕಟ್ಟಡಗಳನ್ನು ಬಿಬಿಎಂಪಿ ಗುರುತಿಸಿದೆ.

- Advertisment -

Most Popular