Home ಆರೋಗ್ಯ ಬಿಪಿ ಸಮಸ್ಯೆಯಿದ್ದರೆ ಈ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು...

ಬಿಪಿ ಸಮಸ್ಯೆಯಿದ್ದರೆ ಈ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು…

ಬಿಪಿ ಸಮಸ್ಯೆ ಕೆಲವು ಮಂದಿಗೆ ವಿಪರೀತ ಸಮಸ್ಯೆಯನ್ನು ತಂದೊಡ್ಡುತ್ತದೆ.

- Advertisement -

ಹಾಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದು ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಒಂದಷ್ಟು ಸಮಸ್ಯೆಗಳು.

- Advertisement -

ಹೆಚ್ಚು ಉಪ್ಪು ತಿನ್ನುವವರಿಗೆ ಬಿಪಿ ಸಮಸ್ಯೆ ಬಹು ಬೇಗ ಕಾಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಉಪ್ಪನ್ನು ಕಡಿಮೆ ತಿನ್ನಿ. ನೇರವಾಗಿ ಉಪ್ಪು ಸೇವಿಸದಿದ್ದರೂ ಉಪ್ಪಿನಕಾಯಿ ಅಥವಾ ಹೆಚ್ಚು ಮಸಾಲೆಯುಕ್ತ ವಸ್ತುಗಳನ್ನು ಸೇವಿಸುವುದರಿಂದ ಬಿಪಿ ಸಮಸ್ಯೆ ಹೆಚ್ಚು ಕಾಡುತ್ತದೆ.

- Advertisement -

ಮಲಗುವ ಮುನ್ನ ಹೊಟ್ಟೆ ತುಂಬಾ ತಿನ್ನಬಾರದು. ಮಲಗುವ ಕನಿಷ್ಠ ಎರಡು ಗಂಟೆ ಮೊದಲೇ ಊಟ ಮಾಡಿ. ಹಾಗೂ ಹಸಿವಾದರೆ ಮಲಗುವ ವೇಳೆ ಫೈಬರ್ ಅಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಿ.

ಮೊಳಕೆ ಕಾಳುಗಳನ್ನು ಹೆಚ್ಚು ಸೇವಿಸಿ. ಸೌತೆಕಾಯಿ ಕತ್ತರಿಸಿ ತಿನ್ನಿ. ಹೆಚ್ಚು ನೀರು ಕುಡಿಯಿರಿ. ನಿತ್ಯ ಮೂರರಿಂದ ಐದು ಲೀಟರ್ ನೀರು ಕುಡಿದರೆ ಒಳ್ಳೆಯದು.

ಉಪ್ಪಿನಂಶ ಹೆಚ್ಚು ಸೇವಿಸಿದರೆ ಕಿಡ್ನಿ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು. ಹಾಗಾಗಿ ಬಿಪಿ ಆರಂಭದ ಹಂತದಲ್ಲಿ ಇರುವಾಗಲೇ ಡಯಟ್ ಪ್ಲಾನ್ ಅನುಸರಿಸಿ ನಿಮ್ಮ ಆರೋಗ್ಯದ ಗುಟ್ಟನ್ನು ನೀವೇ ಕಂಡುಕೊಳ್ಳಿ.

- Advertisment -

Most Popular