Home ನಮ್ಮ ಕರಾವಳಿ ವಿಟ್ಲದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ಹೋಮ್ ಟಚ್: ವಿಟ್ಲ - ಮಂಗಳೂರು ರಸ್ತೆಯ ಭಾರತ್...

ವಿಟ್ಲದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಉದ್ಘಾಟನೆಗೊಂಡ ಹೋಮ್ ಟಚ್: ವಿಟ್ಲ – ಮಂಗಳೂರು ರಸ್ತೆಯ ಭಾರತ್ ಪೆಟ್ರೋಲ್ ಪಂಪ್ ಬಳಿಗೆ ಸ್ಥಳಾಂತರ

ವಿಟ್ಲ: ಕಳೆದ ಹಲವಾರು‌ ವರುಷಗಳಿಂದ ವಿಟ್ಲ – ಪುತ್ತೂರು ರಸ್ತೆಯಲ್ಲಿ ಕಾರ್ಯಾಚರಿಸುತ್ತಿದ್ದ ಫರ್ನೀಚರ್, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆ ಹೋಮ್ ಟಚ್ ಮಾ.೧೫ ರಂದು ವಿಟ್ಲ – ಮಂಗಳೂರು ರಸ್ತೆಯ ಭಾರತ್ ಪೆಟ್ರೋಲ್ ಪಂಪ್ ಬಳಿಯ ತಮ್ಮ ಸ್ವಂತ ಕಟ್ಟಡ ಬಿ.ಎ.ಯಚ್. ಆರ್ಕೆಡ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

- Advertisement -

ನೂತನ ಶೋರೂಂ ಅನ್ನು ಮಾಲಕ ಸಂಶುದ್ದೀನ್ ರವರ ತಂದೆ ಬಿ.ಯೂಸೂಫ್ ಹಾಜಿ, ತಾಯಿ ಅಯಿಶಾ, ಮಾವ ಮುಹಮ್ಮದ್ ಹಾಜಿ ಕೆದಿಲ ಹಾಗೂ ಕಟ್ಟಡದ ಹಿಂದಿನ ಮಾಲಕರಾದ ರಾಧಾಕೃಷ್ಣ ಪೈ ಅಡ್ಯನಡ್ಕರವರು ಉದ್ಘಾಟಿಸಿದರು.

- Advertisement -

ಎಲೆಕ್ಟ್ರಾನಿಕ್ ಮಳಿಗೆಯನ್ನು ಸಮಸ್ಥ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ‌ ಬಂಬ್ರಾಣ, ವಿಟ್ಲ ಕೇಂದ್ರ ಜುಮಾ ಮಸೀದಿಯ ಮುಹಮ್ಮದ್ ಅಲಿ ಫೈಝಿ ಇರ್ಫಾನಿ, ಟೌನ್ ಮಸೀದಿಯ ಖತೀಬರಾದ ಅಬ್ಬಾಸ್ ಮದನಿ, ಹಕೀಂ ಮುಸ್ಲಿಯಾರ್ ವಿಟ್ಲರವರು ಉದ್ಘಾಟಿಸಿದರು.

- Advertisement -

ಸಂಸ್ಥೆಯ ಕೆಳ ಅಂತಸ್ಥನ್ನು  ಕಲ್ಲೆಗ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಶ್ರಫ್ ಕಲ್ಲೆಗರವರು‌ ಉದ್ಘಾಟಿಸಿದರು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಮಯಂತಿ, ಸ್ಟೈಲ್ ಪಾರ್ಕ್ ಮಾಲಕರಾದ ಆರ್.ಕೆ. ಅಬ್ದುಲ್ ಹಾಜಿ, ಶಾಕಿರ್ ಹಾಜಿ ಪುತ್ತೂರು, ಶಕೂರ್ ಹಾಜಿ ಪುತ್ತೂರು,   ಬೊಬ್ಬೆಕೇರಿ ಬಾರತ್ ಪೆಟ್ರೋಲ್ ಬಂಕ್ ಮಾಲಕ  ಒ.ಎ.ಕೃಷ್ಣ, ಸಲೀಂ ಹಾಜಿ ಪೋಳ್ಯ, ಫಾ. ರಿಚರ್ಡ್ ಪಿಂಟೋ,  ಶಾಕೀರ್ ಅಳಕೆಮಜಲು, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಮಹಮ್ಮದ್,  ಒಕ್ಕೆತ್ತೂರು ಮಸೀದಿಯ ಅಧ್ಯಕ್ಷರಾದ ಹಮೀದ್ ವಿ.ಎಂ, ಒಕ್ಕತ್ತೂರು ಮಸೀದಿಯ ಉಪಾಧ್ಯಕ್ಷ, ಪಿ.ಡಬ್ಲ್ಯುಡಿ‌ ಗುತ್ತಿಗೆದಾರರಾದ ಹಸೈನಾರ್, ಇಕ್ಬಾಲ್ ಶೀತಲ್, ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಸ್ಥ ಕೇಂದ್ರ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ‌ ಬಂಬ್ರಾಣ, ಗಜಾನನ ಗ್ರೂಪ್ಸ್ ನ ಮಾಲಕರಾದ ಸಂಜೀವ ಪೂಜಾರಿ, ರಶೀದ್ ವಿಟ್ಲ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ಬಾಣಜಾಲು, ಎಸ್.ಕೆ.ಡಿ.ಪಿ.ಯ ಮಾಜಿ ವ್ಯವಸ್ಥಾಪಕರಾದ ಪದ್ಮನಾಭ ಹೆಗ್ಗಡೆ, ಅಬೂಬಕ್ಕರ್ ನೀರ್ಕಜೆ,
ಕಟ್ಟಡದ ಹಿಂದಿನ ಮಾಲಕರಾದ ರಾಧಾಕೃಷ್ಣ ಪೈ ಅಡ್ಯನಡ್ಕರವರನ್ನು ಸನ್ಮಾನಿಸಲಾಯಿತು.

ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕರಾದ ಸಂಶುದ್ದೀನ್ ಹಾಗೂ ಅವರ ತಂದೆ ಬಿ.ಯೂಸುಫ್ ಹಾಜಿ ರವರು ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಥೆಯಲ್ಲಿ ಪ್ರಸಿದ್ಧ ಕಂಪೆನಿಗಳ ಫರ್ನೀಚರ್ಸ್, ಎಲೆಕ್ಟ್ರಾನಿಕ್ಸ್ ಐಟಂಗಳು ಹಾಗೂ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ ಇದಾಗಿದ್ದು, ಗ್ರಾಹಕರ ಆಯ್ಕೆಗೆ ವಿಪುಲ ಅವಕಾಶವನ್ನು ಕಲ್ಪಿಸಲಾಗಿದೆ.

ಶುಭಾರಂಭದ ಪ್ರಯುಕ್ತ ಪ್ರತಿ ೨೦೦೦ ರೂಪಾಯಿ ಮೌಲ್ಯದ ಖರೀದಿಗೆ ಉಚಿತ ಲಕ್ಕಿ ಕೂಪನ್ ನೀಡಲಾಗುವುದು. ವಿಜೇತ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ಬೆಡ್ ರೂಂ ಸೆಟ್ಟ್, ದ್ವಿತೀಯ ಬಹುಮಾನ ರೆಫ್ರಿಜರೇಟರ್, ತೃತೀಯ ಬಹುಮಾನ ೨ಲೀ ಟಿಲ್ಟಿಂಗ್ ಗ್ರೈಂಡರ್ ಪಡೆಯಬಹುದಾಗಿದೆ. ಸಾಲ ಸೌಲಭ್ಯ ವ್ಯವಸ್ಥೆಯೂ ಇಲ್ಲಿದೆ.

ಭೇಟಿ ನೀಡಿ‌ ಬಹುಮಾನ ಗೆಲ್ಲುವ ಅವಕಾಶ

ಶುಭಾರಂಭದ ಸಲುವಾಗಿ ಆಕರ್ಷಕ ಬಹುಮಾನಗಳನ್ನೂ ಮನೆಗೆ ಒಯ್ಯಲು ಅವಕಾಶವಿದೆ. ಸಂಸ್ಥೆಗೆ ಭೇಟಿ ನೀಡಿದ ಗ್ರಾಹಕರು ತಮ್ಮ ವಿವರ ಭರ್ತಿಮಾಡಿ ಅದೃಷ್ಠ ಚೀಟಿ ಪೆಟ್ಟಿಗೆಗೆ ಹಾಕಿ ಆಕರ್ಷಕ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿತ್ತು.

- Advertisment -

Most Popular