Home ಕ್ರೈಂ ಸುದ್ದಿ ಉಳ್ಳಾಲ: ರಸ್ತೆ ಬದಿ ನಿಲ್ಲಿಸಿದ್ದ ಆಂಬುಲೆನ್ಸ್ ವಾಹನದ ಗಾಜು ಒಡೆದು ವಸ್ತು ದೋಚಿದ ಕಿಡಿಗೇಡಿಗಳು

ಉಳ್ಳಾಲ: ರಸ್ತೆ ಬದಿ ನಿಲ್ಲಿಸಿದ್ದ ಆಂಬುಲೆನ್ಸ್ ವಾಹನದ ಗಾಜು ಒಡೆದು ವಸ್ತು ದೋಚಿದ ಕಿಡಿಗೇಡಿಗಳು

ಉಳ್ಳಾಲ: ಇಲ್ಲಿನ ಮುಕ್ಕಚ್ಚೇರಿಯಲ್ಲಿ ರಸ್ತೆ ಬದಿ ನಿಂತಿದ್ದ ಆಂಬುಲೆನ್ಸ್ ಟಿಟಿ ವಾಹನದ ಗಾಜನ್ನು ಒಡೆದ ಕಿಡಿಗೇಡಿಗಳು ಸೈರನ್ ಆಂಪ್ ಮತ್ತು ಆಡಿಯೋ ಸ್ಟಿರಿಯೋವನ್ನು ದೋಚಿದ ಘಟನೆ ನಡೆದಿದೆ.

- Advertisement -

ಗಂಗಾಧರ್ ಎಂಬವರಿಗೆ ಸೇರಿದ ಶ್ರೀ ಗಣೇಶ್ ಹೆಸರಿನ ಆಂಬುಲೆನ್ಸಿನ ಗಾಜನ್ನು ಕಿಡಿಗೇಡಿಗಳು ಪುಡಿಗೈದಿದ್ದಾರೆ. ಆಂಬುಲೆನ್ಸ್ ಚಾಲಕ ಮುಕ್ಕಚ್ಚೇರಿ ನಿವಾಸಿಯಾಗಿದ್ದು ನಿನ್ನೆ ರಾತ್ರಿ ರಸ್ತೆ ಬದಿಯಲ್ಲಿ ಟಿಟಿ ವಾಹನವನ್ನ ನಿಲ್ಲಿಸಿದ್ದರು. ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳಲು ಚಾಲಕ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಕಿಡಿಗೇಡಿಗಳು ಆಂಬುಲೆನ್ಸ್ ನ ಗ್ಲಾಸ್ ಒಡೆದು ಒಳನುಗ್ಗಿ ಸೈರನ್ ಆಗುವ ಬೆಲೆ ಬಾಳುವ ಆಂಪ್ಲಿಫಯರ್ ಮತ್ತು ಆಡಿಯೋ ಸ್ಟಿರಿಯೋವನ್ನ ದೋಚಿದ್ದಾರೆ.

- Advertisement -

ಅಲ್ಲದೆ ಒಳಗಿದ್ದ ಕೆಲ ಸರ್ಜಿಕಲ್ ಪರಿಕರಗಳನ್ನ ರಸ್ತೆಗೆಸೆದು ವಿಕೃತಿ ಮೆರೆದಿದ್ದಾರೆ. ಗಂಗಾಧರ್ ಅವರು ತನ್ನ ಆಂಬುಲೆನ್ಸ್ ಗಳ ಮುಖೇನ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಇಂತಹ ವ್ಯಕ್ತಿಯ ವಾಹನವನ್ನೇ ಪುಡಿಗಟ್ಟಿದ ಕಿಡಿಗೇಡಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತಂತೆ ಗಂಗಾಧರ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -
- Advertisment -

Most Popular