Home ಕಾನೂನು ಮಾಹಿತಿ ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ "ಬ್ಯಾರಿ ಬಾಸೆರೊ ನಾಲಾಚರನೆ 2021"

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ “ಬ್ಯಾರಿ ಬಾಸೆರೊ ನಾಲಾಚರನೆ 2021”

ಮಂಗಳೂರು : ಮಾತೃಭಾಷೆ – ಸಂಸ್ಕ್ರತಿಯನ್ನು ಯಾರು ಪ್ರೀತಿ ಮಾಡುತ್ತಾರೋ ಅಂತಹವರು ಇನ್ನೊಂದು
ಭಾಷೆ – ಜನಾಂಗವನ್ನು ಪ್ರೀತಿಸುತ್ತಾರೆ. ಇಂತಹ ಪ್ರೀತಿಯಿಂದಲೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ ಬದುಕು ನಿರ್ಮಾಣಗೊಂಡಿದೆ ಎಂದು ರೆಡ್ ಕ್ರಾಸ್ ಸೊಸೈಟಿಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹೇಳಿದರು.

- Advertisement -

ಅವರು ಮಂಗಳೂರು ಶ್ರೀನಿವಾಸ ಹೋಟೆಲಿನಲ್ಲಿ ಅಖಿಲ ಭಾರತ ಬ್ಯಾರಿ ಪರಿಷತ್ ಏರ್ಪಡಿಸಿದ್ದ ” “ಬ್ಯಾರಿ ಬಾಸೆರೊ ನಾಲಾಚರಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬ್ಯಾರಿ ಮುಂದಾಳು ಅಬ್ದುಲ್ ಖಾದರ್ ಕೊಣಾಜೆ ಉದ್ಘಾಟಿಸಿ, ಸಂಸ್ಥೆಯ ಅಧ್ಯಕ್ಷ ಜಿ.ಎಮ್. ಶಾಹುಲ್ ಹಮೀದ್ ಮೆಟ್ರೋ ಅಧ್ಯಕ್ಷತೆ ವಹಿಸಿದ್ದರು.

- Advertisement -


ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಬ್ಯಾರಿ ಭಾಷಾ ದಿನಾಚರಣೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯ ಅಬ್ದಲ್ ಲತೀಫ್ ಕಂದಕ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಂಕಪಾಡಿ, ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ, ಮಾಜಿ ಉಪಮೆಯರ್ ಮುಹಮ್ಮದ್ ಕುಂಜತ್ತಬೈಲ್, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ರಿಯಾಝ್ ಬಂಟ್ವಾಳ, ಸಾಹಿತಿ ಪೇರೂರು ಜಾರು ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಬ್ಯಾರಿ ಗಾದೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಜೆ.ಹುಸೇನ್ ಪುರಸ್ಕರಿಸಿದರು.
ಹಸನಬ್ಬ ಮೂಡುಬಿದಿರೆ, ಹುಸೈನ್ ಕಾಟಿಪಳ್ಳ, ಇಬ್ರಾಹಿಮ್ ಬಾತಿಷಾ ಇವರಿಂದ ಬ್ಯಾರಿ ಗಾಯನ ನಡೆಯಿತು.

- Advertisement -


ಸಂಸ್ಥೆಯ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಸ್ವಾಗತಿಸಿ, ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಕಿರಾಅತ್ ಪಠಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹಕ್ ಕಾರ್ಯಕ್ರಮ ನಿರೂಪಿಸಿದರು.

- Advertisment -

Most Popular