Home ಕ್ರೈಂ ಸುದ್ದಿ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ: ಮಗನಿಂದ ಕೊಲೆಗೆ ಸುಪಾರಿ

ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ: ಮಗನಿಂದ ಕೊಲೆಗೆ ಸುಪಾರಿ

ಚಿಕ್ಕಬಳ್ಳಾಪುರ: ಇಬ್ಬರು ಸುಪಾರಿ ಕಿಲ್ಲರ್ ಗಳಿಂದ ಮಹಿಳೆಯ ಬರ್ಬರ ಹತ್ಯೆ ನಡೆಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.

- Advertisement -

ನಳಿನಿ(55) ಹತ್ಯೆಯಾದ ಮಹಿಳೆ. ಮನೆಗೆ ನುಗ್ಗಿ ಕತ್ತು ಕೊಯ್ದು ಮಹಿಳೆಯನ್ನು ಹತ್ಯೆ ಮಾಡಲಾಗಿದ್ದು, ಪರಾರಿಯಾಗುತ್ತಿದ್ದ ಆರೋಪಗಳನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

ಆಸ್ತಿ ವಿವಾದಕ್ಕೆ ಮಗನೇ ಸುಪಾರಿ ನೀಡಿ ತಾಯಿಯನ್ನು ಕೊಲೆ ಮಾಡಿಸಿದ್ದಾನೆ. ತಾಯಿ ಕೊಲೆಗೆ ಪುತ್ರ 5 ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದಾನೆ ಎಂದು ಪೊಲೀಸರ ಮುಂದೆ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

- Advertisement -

ಆಂಧ್ರಪ್ರದೇಶದ ವಿಜಯವಾಡದ ಮುಕೇಶ್ ಹಾಗೂ ಹರಿ ಅವರನ್ನು ಬಂಧಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

- Advertisment -

Most Popular