Home ಕ್ರೀಡೆ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ

ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಸ್ಮೃತಿ ಮಂಧನಾ

ಕ್ವೀನ್ಸ್ ಲ್ಯಾಂಡ್: ಆಸ್ಟ್ರೇಲಿಯಾದ ಮಹಿಳೆಯರ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಶತಕ ಬಾರಿಸಿದ್ದು, ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

- Advertisement -

ಕರಾರಾ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಮಂಧನಾ ಆರಂಭದಲ್ಲಿ ವೇಗವಾಗಿ ಬ್ಯಾಟ್ ಬೀಸಿದ್ದು, ಮೊದಲ ವಿಕೆಟ್ ಬಿದ್ದ ಬಳಿಕ ಹೆಚ್ಚಿನ ಜಾಗರೂಕತೆಯಿಂದ ಆಟವಾಡಿದರು. ಮೊದಲ ದಿನದಾಟದ ಅಂತ್ಯಕ್ಕೆ ಅಜೇಯ 80 ರನ್ ಗಳಿಸಿದ್ದ ಸ್ಮೃತಿ ಇಂದು ಶತಕ ಪೂರೈಸಿದರು.

- Advertisement -

ಒಟ್ಟು ಮಂಧನಾ 127 ರನ್ ಗಳಿಸಿ ಔಟಾಗಿದ್ದು, ಈ ಇನ್ನಿಂಗ್ಸ್ ನಲ್ಲಿ ಸ್ಮೃತಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.

- Advertisement -
- Advertisment -

Most Popular