Home ಕ್ರೀಡೆ ಸನ್ ರೈಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ವಿದಾಯ

ಸನ್ ರೈಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ವಿದಾಯ

ದುಬೈ: ಈ ವರ್ಷ ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್ ಸನ್ ರೈಸ್ ಹೈದರಾಬಾದ್ ತಂಡಕ್ಕೆ ಗುಡ್ಬೈ ಹೇಳಿದ್ದಾರೆ.

- Advertisement -

ಐಪಿಎಲ್ 2021ರಲ್ಲಿ ಡೇವಿಡ್ ವಾರ್ನರ್ ಕಳಪೆ ಪ್ರದರ್ಶನ ನೀಡಿ ಸನ್ ರೈಸರ್ಸ್ ಹೈದರಾಬಾದ್ ತಂಡ ಆಡುವ 11ರಲ್ಲಿ ಸ್ಥಾನ ಸಿಗದೆ ಹೊರಗುಳಿದಿದ್ದರು. ಲೀಗ್ ಹಂತದ ಪಂದ್ಯಗಳು ಮುಗಿಯುತ್ತಿದ್ದಂತೆ ಡೇವಿಡ್ ವಾರ್ನರ್ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನ ಹಾಕಿದ್ದಾರೆ. ಭಾವುಕವಾಗಿ ಪೋಸ್ಟ್ ಹಾಕಿರುವ ವಾರ್ನರ್ ಸನ್ ರೈಸರ್ಸ್ ತಂಡ ತೊರೆಯುವ ಸೂಚನೆ ಕೊಟ್ಟಿದ್ದಾರೆ.

- Advertisement -

ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗೆ ಡೇವಿಡ್ ವಾರ್ನರ್ ಪೋಸ್ಟ್ವೊಂದನ್ನ ಮಾಡಿದ್ದಾರೆ. ‘ನನಗೆ ನೀವು ನೀಡಿದ ನೆನೆಪುಗಳು ಎಂದಿಗೂ ಮರೆಯುವಂತಿಲ್ಲ ಇದಕ್ಕಾಗಿ ನಿಮಗೆ ಧನ್ಯವಾದಗಳು. ನಮ್ಮ ತಂಡವನ್ನು ನೂರರಷ್ಟು ಸಪೋರ್ಟ್ ಮಾಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು.

- Advertisement -

ನನಗೆ ನೀವು ತೋರಿದ ಪ್ರೀತಿಯನ್ನ ಹೇಳಿಕೊಳ್ಳಲು ಪದಗಳು ಸಿಗುತ್ತಿಲ್ಲ. ಇದೊಂದು ನನಗೆ ಅದ್ಭುತ ಪ್ರಯಾಣವಾಗಿದ್ದು, ನನ್ನ ಕುಟುಂಬದಂತಿದ್ದ ನಿಮ್ಮನೆಲ್ಲ ಕಳೆದುಕೊಳ್ಳುತ್ತಿದ್ದೇನೆ’ ಎಂದು ವಾರ್ನರ್ ಭಾವುಕದಿಂದ ಪೋಸ್ಟ್ ಮಾಡಿದ್ದಾರೆ.

- Advertisment -

Most Popular