Home ನಮ್ಮ ಕರಾವಳಿ ದ.ಕ ಜಿಲ್ಲೆಯಲ್ಲಿ ಕೋವಿಡ್ ಎರಡು ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಚಿತ್ರಮಂದಿರಗಳಿಗೆ ಪ್ರವೇಶ:ದ.ಕ ಜಿಲ್ಲಾಧಿಕಾರಿ ಆದೇಶ

ದ.ಕ ಜಿಲ್ಲೆಯಲ್ಲಿ ಕೋವಿಡ್ ಎರಡು ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಚಿತ್ರಮಂದಿರಗಳಿಗೆ ಪ್ರವೇಶ:
ದ.ಕ ಜಿಲ್ಲಾಧಿಕಾರಿ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮಾಲ್ ಮತ್ತು ಚಿತ್ರ ಮಂದಿರಗಳಿಗೆ ಪ್ರವೇಶಕ್ಕೆ ಕೋವಿಡ್ ಲಸಿಕೆ ಕಡ್ಡಾಯ ನಿಯಮವನ್ನು ಜಾರಿಗೆಗೊಳಿಸಿದೆ. ಈ ಕುರಿತು ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಾಹಿತಿಯನ್ನು ನೀಡಿದ್ದಾರೆ.

- Advertisement -

ಮಲ್ಟಿಪೆಕ್ಸ್ ಗಳು, ಥಿಯೇಟರ್ ಗಳು, ಚಿತ್ರಮಂದಿರಗಳಿಗೆ ಎರಡು ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ನೀಡಿದರೆ ಮಾತ್ರ ತೆರಳಲು ಅವಕಾಶ ನೀಡಲಾಗುವುದು. ಎಲ್ಲರೂ ಲಸಿಕೆಯನ್ನು ಹಾಕಬೇಕು. ಈ ಬಗ್ಗೆ ಕಟ್ಟು ನಿಟ್ಟಾದ ಕ್ರಮವನ್ನು ಜಾರಿಗೆ ತರಲಾಗುವುದು. ಅಧಿಕಾರಿಗಳು ಇನ್ನು ಮುಂದೆ ಸಾರ್ವಜನಿಕವಾಗಿ ಲಸಿಕೆ ಹಾಕದವರಲ್ಲಿ ಪ್ರಶ್ನಿಸಲಿದ್ದಾರೆ ಎಂದು ರಾಜೇಂದ್ರ ಅವರು ಹೇಳಿದ್ದಾರೆ.

- Advertisement -
- Advertisment -

Most Popular