Home ರಾಷ್ಟ್ರೀಯ ಸೂರತ್: ಪ್ಯಾಕೇಜಿಂಗ್ ಘಟಕದಲ್ಲಿ ಬೆಂಕಿ ಅವಘಡ:ಇಬ್ಬರು ಮೃತ್ಯು, 100 ಕ್ಕೂ ಹೆಚ್ಚು ಜನರ ರಕ್ಷಣೆ

ಸೂರತ್: ಪ್ಯಾಕೇಜಿಂಗ್ ಘಟಕದಲ್ಲಿ ಬೆಂಕಿ ಅವಘಡ:
ಇಬ್ಬರು ಮೃತ್ಯು, 100 ಕ್ಕೂ ಹೆಚ್ಚು ಜನರ ರಕ್ಷಣೆ

ಗುಜರಾತ್‌: ಸೂರತ್ ಜಿಲ್ಲೆಯ ಐದು ಅಂತಸ್ತಿನ ಪ್ಯಾಕೇಜಿಂಗ್ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಕಡೋದರ ಕೈಗಾರಿಕಾ ಪ್ರದೇಶದಲ್ಲಿರುವ ಘಟಕದಿಂದ 100 ಕ್ಕೂ ಹೆಚ್ಚು ಇತರರನ್ನು ರಕ್ಷಿಸಲಾಗಿದೆ, ಘಟನೆಯಲ್ಲಿ ಕೆಲವು ಕಾರ್ಮಿಕರು ಕೂಡ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಬೆಳಗಿನ ಜಾವ 4.30 ರ ಸುಮಾರಿಗೆ ವಿವಾ ಪ್ಯಾಕೇಜಿಂಗ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕಡೋದರ ಪೊಲೀಸ್ ಇನ್ಸ್‌ಪೆಕ್ಟರ್ ಹೇಮಂತ್ ಪಟೇಲ್ ತಿಳಿಸಿದ್ದಾರೆ.

- Advertisement -

ಘಟಕದ ಮೊದಲ ಮಹಡಿಯಲ್ಲಿ ಬೆಂಕಿ ಪ್ರಾರಂಭವಾಯಿತು ಮತ್ತು ಶೀಘ್ರದಲ್ಲೇ ಇತರ ಮಹಡಿಗಳಿಗೆ ಹರಡಿತು ಕಟ್ಟಡದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಹೈಡ್ರಾಲಿಕ್ ಕ್ರೇನ್‌ಗಳನ್ನು ಬಳಸಲಾಗಿದೆ. ಬೆಂಕಿಯ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisment -

Most Popular