Home ಅಂತಾರಾಷ್ಟ್ರೀಯ ಇಸ್ಲಾಂ ವಿರುದ್ಧ ವಿವಾದಾತ್ಮಕ ಹೇಳಿಕೆ- ಪ್ರವಾದಿ ನಿಂದನೆಯ ಕಾರ್ಟೂನ್: ಕುವೈತ್, ಕತಾರ್, ಮೊರೊಕ್ಕೊ ಸೇರಿದಂತೆ...

ಇಸ್ಲಾಂ ವಿರುದ್ಧ ವಿವಾದಾತ್ಮಕ ಹೇಳಿಕೆ- ಪ್ರವಾದಿ ನಿಂದನೆಯ ಕಾರ್ಟೂನ್: ಕುವೈತ್, ಕತಾರ್, ಮೊರೊಕ್ಕೊ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಫ್ರೆಂಚ್ ಸರಕುಗಳ ಬಹಿಷ್ಕಾರದ ಅಭಿಯಾನ

ದೋಹಾ: ಫ್ರೆಂಚ್ ಅಧ್ಯಕ್ಷರ ಇಸ್ಲಾಂ ವಿರುದ್ಧದ ವಿವಾದಾತ್ಮಕ ಹೇಳಿಕೆ ಹಾಗೂ ಪ್ರವಾದಿ ನಿಂದನೆಯ ಕಾರ್ಟೂನ್ ಪ್ರೋತ್ಸಾಹಿಸಿದ ಸರಕಾರದ ವಿರುಧ್ದ , ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನವು ಹಲವು ಕೊಲ್ಲಿ ರಾಷ್ಟ್ರಗಳು ಹಾಗೂ ಮುಸ್ಲಿಂ ಜಗತ್ತಿನಲ್ಲಿ ಪ್ರತಿಭಟನೆಯ ಕಾವು ಪಡೆಯುತ್ತಿದೆ.

- Advertisement -

ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತನ್ನ ಚುನಾವಣೆಯ ಸಮಯವನ್ನು ಎದುರು ನೋಡಿಕೊಂಡು, ತನ್ನ ಸರಕಾರದ ವೈಫಲ್ಯಗಳನ್ನು ಮರೆಮಾಚಲು ಮುಸ್ಲಿಮರ ಭಾವನೆಗಳನ್ನು ಬಲಿಕೊಡಲಾಗುತ್ತಿದೆ ಎಂದು ಹಲವು‌ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

- Advertisement -

ಶನಿವಾರ, ಫ್ರೆಂಚ್ ಅಧ್ಯಕ್ಷರ ಈ ನಡೆಯನ್ನು ಖಂಡಿಸಿದ ಜೋರ್ಡಾನ್ ವಿದೇಶಾಂಗ ಸಚಿವಾಲಯವು “ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಪ್ರವಾದಿ (ಸ) ರ ವ್ಯಂಗ್ಯಚಿತ್ರಗಳ ಪ್ರಕಟಣೆಯನ್ನು ಮುಂದುವರೆಸಿದ್ದು ಹಾಗೂ ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲು ಪ್ರಯತ್ನಿಸುವ ಯಾವುದೇ ತಾರತಮ್ಯ ಮತ್ತು ದಾರಿತಪ್ಪಿಸುವ ಪ್ರಯತ್ನಗಳನ್ನು” ಖಂಡಿಸುತ್ತದೆ ಎಂದು ಹೇಳಿದರು. ಹಾಗೂ ಜೋರ್ಡನ್ ರಾಜಕೀಯ ಪಕ್ಷಗಳು ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸುವಂತೆ ರಾಜ್ಯದ ನಾಗರಿಕರನ್ನು ಒತ್ತಾಯಿಸಿದೆ.

- Advertisement -

ಕುವೈತ್ ಹಾಗೂ ಕತಾರ್ ದೇಶದ ಮಳಿಗೆಗಳು ಡಜನ್ ಗಟ್ಟಲೆ ಫ್ರೆಂಚ್ ಉತ್ಪನ್ನಗಳನ್ನು ಈಗಾಗಲೇ ಬಹಿಷ್ಕರಿಸಿವೆ.
ಕತಾರ್ ದೇಶದ ಪ್ರಮುಖ ಸಂಸ್ಥೆಗಳಾದ ಅಲ್ ಮೀರಾ ಮತ್ತು ಸೌಕ್ ಅಲ್ ಬಾಲಾಡಿ ಅವರು ಶುಕ್ರವಾರ ತಡರಾತ್ರಿ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಮುಂದಿನ ಸೂಚನೆ ಬರುವವರೆಗೂ ಫ್ರೆಂಚ್ ಉತ್ಪನ್ನಗಳನ್ನು ಅಂಗಡಿಗಳಿಂದ ಹಿಂಪಡೆಯುವುದಾಗಿ ಹೇಳಿದ್ದಾರೆ.

ಈ ನಡುವೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್‌ ಅವರ ಹೇಳಿಕೆ‌ ಖಂಡಿಸಿರುವ ಟರ್ಕಿ ಅಧ್ಯಕ್ಷ ಎರ್ಡೊಗನ್ ಫ್ರೆಂಚ್ ಅಧ್ಯಕ್ಷರಿಗೆ ‘ಮಾನಸಿಕ ತಪಾಸಣೆಗೆ’ ಒಳಗಾಗುವಂತೆ ತಮ್ಮ ದೂರದರ್ಶನ ಭಾಷಣದಲ್ಲಿ ಟೀಕಿಸಿದ್ದಾರೆ.

ಅದೇ ದಿನ, ಟ್ವೀಟ್ ಮಾಡಿ್ ಕತಾರ್ ವಿಶ್ವವಿದ್ಯಾಲಯವು “ಇಸ್ಲಾಂ ಮತ್ತು ಅದರ ಚಿಹ್ನೆಗಳನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡ ನಂತರ, ಫ್ರೆಂಚ್ ಸಾಂಸ್ಕೃತಿಕ ವಾರವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗುವುದು, ಈ ಸಂದರ್ಭದಲ್ಲಿ 2020 ಫ್ರಾನ್ಸ್-ಕತಾರ್ ಸಂಸ್ಕೃತಿಯ ವರ್ಷವಾಗಿದೆ.” ಎಂದು ಹೇಳಿಕೊಂಡಿದೆ.

ಕೊಲ್ಲಿ ಸಹಕಾರ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಯೀಫ್ ಫಲಾಹ್ ಮುಬಾರಕ್ ಅಲ್-ಹಜ್ರಾಫ್ ಅವರು ಶುಕ್ರವಾರ ಮ್ಯಾಕ್ರನ್‌ರ ಮಾತುಗಳನ್ನು “ಬೇಜವಾಬ್ದಾರಿಯುತ” ಎಂದು ಕರೆದರು ಮತ್ತು ಅವರು “ದ್ವೇಷದ ಸಂಸ್ಕೃತಿಯ ಹರಡುವಿಕೆಯನ್ನು ಹೆಚ್ಚಿಸುತ್ತಾರೆ” ಎಂದು ಹೇಳಿದರು.

ಮೊರೊಕ್ಕೋ , ಅಲ್ಜೀರಿಯಾ ಸೇರಿದಂತೆ ಹಲವು ಇತರೆ ರಾಷ್ಟ್ರಗಳಲ್ಲೂ ಫ್ರೆಂಚ್ ಸರಕಿನ ಬಹಿಷ್ಕಾರದ ಕಾವು ಹೆಚ್ಚಾಗುತ್ತಿದೆ.

- Advertisment -

Most Popular