Home ರಾಷ್ಟ್ರೀಯ ಅಪೌಷ್ಟಿಕತೆ: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ರಾಷ್ಟ್ರಗಳಿಂದ ಹಿಂದುಳಿದ ಭಾರತ

ಅಪೌಷ್ಟಿಕತೆ: ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ರಾಷ್ಟ್ರಗಳಿಂದ ಹಿಂದುಳಿದ ಭಾರತ

ನವದೆಹಲಿ: ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಂದ ಹಿಂದುಳಿದಿದೆ.

- Advertisement -

ಜಾಗತಿಕ ಹಸಿವು ಸೂಚ್ಯಂಕ 2021ರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ 76, ಬಾಂಗ್ಲಾದೇಶ 76, ಮ್ಯಾನ್ಮಾರ್‌ 71 ಮತ್ತು ಪಾಕಿಸ್ತಾನ 92ನೇ ರ‍್ಯಾಂಕ್‌ ಪಡೆದಿವೆ.

- Advertisement -

ಚೀನಾ, ಬ್ರೆಜಿಲ್‌ ಮತ್ತು ಕುವೈತ್‌ ಸೇರಿದಂತೆ 18 ರಾಷ್ಟ್ರಗಳು ಮೊದಲ ಸ್ಥಾನವನ್ನು ಹಂಚಿಕೊಂಡಿವೆ. ಆದರೆ ಭಾರತ 101ನೇ ರ‍್ಯಾಂಕ್‌ಗೆ ಕುಸಿದಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ 107 ರಾಷ್ಟ್ರಗಳ ಪೈಕಿ 94ನೇ ಸ್ಥಾನದಲ್ಲಿತ್ತು.

- Advertisement -

ಜಾಗತಿಕ ಹಸಿವು ಸೂಚ್ಯಂಕ(ಜಿಎಚ್‌ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತದೆ. ಐರ್ಲೆಂಡ್‌ನ ಧನಸಹಾಯ ಹೊಂದಿರುವ ಏಜೆನ್ಸಿ ಕನ್ಸರ್ನ್‌ ವರ್ಲ್ಡ್‌ವೈಡ್‌ ಮತ್ತು ಜರ್ಮನಿಯ ಸಂಸ್ಥೆ ವೆಲ್ಟ್‌ ಹಂಗರ್‌ ಹೆಲ್ಪ್‌ ಸಹಯೋಗದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ವಿಶ್ವದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇಕಡಾ 17.3 ಇದೆ. 1998-2002ರ ನಡುವೆ ಈ ಪ್ರಮಾಣ ಶೇಕಡಾ 17.1 ಇತ್ತು ಎಂದು ಜಿಎಚ್‌ಐ ವರದಿ ಹೇಳಿದೆ.

- Advertisment -

Most Popular