Home ತಂತ್ರಜ್ಞಾನ ಶಿವನ ಕೈಯಲ್ಲಿ ವೈನ್ ಗ್ಲಾಸ್, ಮೊಬೈಲ್ ಹಿಡಿಸಿದ ಸ್ಟಿಕ್ಕರ್: ಇನ್ಸ್ಟಾಗ್ರಾಂ ವಿರುದ್ಧ ದೂರು

ಶಿವನ ಕೈಯಲ್ಲಿ ವೈನ್ ಗ್ಲಾಸ್, ಮೊಬೈಲ್ ಹಿಡಿಸಿದ ಸ್ಟಿಕ್ಕರ್: ಇನ್ಸ್ಟಾಗ್ರಾಂ ವಿರುದ್ಧ ದೂರು

ಹೊಸದಿಲ್ಲಿ: ಇನ್ಸ್ಟಾಗ್ರಾಂ ಭಗವಾನ್ ಶಿವನ ಚಿತ್ರಕ್ಕೆ ಅಪಮಾನ ಮಾಡಿದೆ. ಶಿವನ ಕೈಯಲ್ಲಿ ವೈನ್ ಗ್ಲಾಸ್ ಮತ್ತು ಮೊಬೈಲ್ ಹಿಡಿಸಿದೆ.

- Advertisement -

ಸದ್ಯ ಈ ವಿವಾರ ವೈರಲ್ ಆಗುತ್ತಿದ್ದಂತೆ ಎಲ್ಲರೂ ಆಕ್ರೋಶ ಹೊರಹಾಕಿದ್ದಾರೆ. ಕ್ಷಮೆ ಕೇಳುವಂತೆ ಕೇಳಿಕೊಂಡಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್ಶಾಟ್ ತೆಗೆಯುವ ಮೂಲಕ ಶೇರ್ ಮಾಡಿಕೊಂಡಿದ್ದು, ಹಿಂದು ದೇವರನ್ನು ಈ ರೀತಿ ಚಿತ್ರಿಸಿ ಅಪಮಾನ ಮಾಡಿದ ಇನ್ಸ್ಟಾಗ್ರಾಂ ಕ್ಷಮೆ ಕೇಳಬೇಕು ಎಂದು ಬರೆದುಕೊಂಡಿದ್ದಾರೆ.

- Advertisement -

ದೆಹಲಿ ಮೂಲದ ನಿವಾಸಿ ಮನೀಶ್​ ಸಿಂಗ್​ ಈ ವಿಚಾರವಾಗಿ ಎಫ್​ಐಆರ್​ ಸಲ್ಲಿಸಿದ್ದಾರೆ. ಶಿವನನ್ನು ವೈನ್​ ಗ್ಲಾಸ್​ ಮತ್ತು ಮೊಬೈಲ್​ ಹಿಡಿದಿರುವ ಚಿತ್ರಕ್ಕಾಗಿ ದೂರು ನೀಡಿದ್ದಾರೆ.

- Advertisement -

ಇನ್​ಸ್ಟಾಗ್ರಾಂ ಸ್ಟೋರಿಯನ್ನು ಅಪ್ಲೋಡ್​ ಮಾಡುವಾಗ ಬಳಕೆದಾರರು ಸರ್ಚ್​ ಪೆಟ್ಟಿಗೆಯಲ್ಲಿ ಶಿವ ಎಂದು ಟೈಮ್​ ಮಾಡಿದಾಗ ವೈನ್​ ಗ್ಲಾಸ್ ಮತ್ತು ಮೊಬೈಲ್ ಹಿಡಿದ ಶಿವನ ಫೋಟೋ ಕಾಣಿಸುತ್ತದೆ. ಇದನ್ನು ಸ್ವತಃ ಇನ್​​ಸ್ಟಾಗ್ರಾಂ ಒದಗಿಸಿದೆ. ಹಿಂದೂ ಸಮುದಾಯವನ್ನು ನೋಯಿಸುವ ಸಲುವಾಗಿ ಜಿಫ್​ ರಚಿಸಿದೆ. ಎಂದು ದೂರುದಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisment -

Most Popular