Home ಕ್ರೀಡೆ ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್ ನಲ್ಲಿ ಹೊರ ನಡೆಯಲು ನಿರ್ಧಾರ

ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಈ ಬಾರಿಯ ಐಪಿಎಲ್ ನಲ್ಲಿ ಹೊರ ನಡೆಯಲು ನಿರ್ಧಾರ

ದುಬೈ: ಕೆ.ಎಲ್.ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ. ಇದಕ್ಕೂ ಮೊದಲು ಪಂಜಾಬ್ ಕಿಂಗ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಪೋಟಕ ಆಟಗಾರ ಕ್ರಿಸ್ ಗೇಲ್ ಅವರು ಈ ಬಾರಿಯ ಐಪಿಎಲ್ ನಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ.

- Advertisement -

ಹೌದು, ಸ್ವತಃ ಈ ಬಗ್ಗೆ ಕ್ರಿಸ್ ಗೇಲ್ ಸ್ಪಷ್ಟಪಡಿಸಿದ್ದಾರೆ. “ಕಳೆದ ಕೆಲವು ತಿಂಗಳಿನಿಂದ ನಾನು ವೆಸ್ಟ್ ಇಂಡೀಸ್ ಬಬಲ್, ಸಿಪಿಎಲ್ ಬಬಲ್, ಮತ್ತು ಐಪಿಎಲ್ ನ ಬಬಲ್ ಗಳಲ್ಲಿ ಕಾಲ ಕಳೆದಿದ್ದೇನೆ. ಮುಂದಿನ ಟಿ20 ವಿಶ್ವಕಪ್ ಗೆ ಮೊದಲು ಮಾನಸಿಕವಾಗಿ ರಿಚಾರ್ಜ್ ಮಾಡಿಕೊಳ್ಳುವ ಅಗತ್ಯವಿದೆ” ಎಂದು ಯುನಿವರ್ಸ್ ಬಾಸ್ ಗೇಲ್ ಹೇಳಿದ್ದಾರೆ.

- Advertisement -

ನಾನು ವೆಸ್ಟ್ ಇಂಡೀಸ್ ತಂಡಕ್ಕಾಗಿ ಹೆಚ್ಚಿನ ಗಮನ ನೀಡಲು ಇಚ್ಚಿಸಿದ್ದೇನೆ. ಹೀಗಾಗಿ ದುಬೈ ನಲ್ಲಿ ವಿಶ್ರಾಂತಿ ಪಡೆಯಬೇಕಿದೆ. ನನಗೆ ಅನುಮತಿ ನೀಡಿದ್ದಕ್ಕಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಮುಂದಿನ ಪಂದ್ಯಗಳಿಗೆ ಅವರಿಗೆ ಶುಭವಾಗಲಿ ಎಂದು ಗೇಲ್ ಹೇಳಿದ್ದಾರೆ.

- Advertisement -
- Advertisment -

Most Popular