Home ಕ್ರೀಡೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ 5 ವಿಕೆಟ್ ಗಳ ಜಯ

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ 5 ವಿಕೆಟ್ ಗಳ ಜಯ

ದುಬೈ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 45 ನೇ ಪಂದ್ಯದಲ್ಲಿ‌ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು 5 ವಿಕೆಟ್ ಗಳ ಗೆಲುವು ಸಾಧಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೊಲ್ಕತ್ತಾ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಗಳ ಗುರಿಯನ್ನು ನೀಡಿತು. ಆಕರ್ಷಕ ಅರ್ಧ ಶತಕ ಗಳಿಸಿದ ವೆಂಕಟೇಶ್ ಅಯ್ಯರ್ ತಂಡಕ್ಕೆ ಉತ್ತಮ ಇನ್ನಿಂಗ್ಸ್ ಆರಂಬಿಸಿದರು. ವೆಂಕಟೇಶ್ ಅಯ್ಯರ್ (67) ರಾಹುಲ್ ತ್ರಿಪಾಠಿ (34) ನಿತೀಶ್ ರಾಣಾ (31) ಅಗ್ರ ಸ್ಕೋರರ್ ಎನಿಸಿಕೊಂಡರು.

- Advertisement -

ಕೊಲ್ಕತ್ತಾ ನೈಟ್ ರೈಡರ್ಸ್ ನೀಡಿದ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡವು 19.3 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ಗಳಿಸಿ 5 ವಿಕೆಟ್ ಗಳ ವಿಜಯ ಸಾಧಿಸಿದರು. ಆರಂಭಿಕ ಆಟಗಾರರಾದ ‌ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ ಗೆ 70 ರನ್ನಿನ ಆರಂಭ ನೀಡಿದರು. ಕೆ. ಎಲ್ ರಾಹುಲ್ (67) ಮಯಾಂಕ್ ಅಗರ್ವಾಲ್ (40) ಶಾರುಖ್ ಖಾನ್ (16*)ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

- Advertisement -

ಪಂಜಾಬ್ ಕಿಂಗ್ಸ್ ಪರವಾಗಿ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಅರ್ಷದೀಪ್ ಸಿಂಗ್ 3, ರವಿ ಬಿಷ್ಣೋಯ್ 2 ಮತ್ತು ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದು ಮಿಂಚಿದರು.

- Advertisment -

Most Popular