Home ಕ್ರೀಡೆ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗಳ ಜಯ

ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ 4 ವಿಕೆಟ್ ಗಳ ಜಯ

ಶಾರ್ಜ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 46 ನೇ ಪಂದ್ಯದಲ್ಲಿ‌ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಗಳ ಗೆಲುವು ಸಾಧಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳ ಗುರಿಯನ್ನು ನೀಡಿತು. ಸೂರ್ಯ ಕುಮಾರ್ ಯಾದವ್ (33) ಡಿ ಕೋಕ್ (19) ಹಾರ್ದಿಕ್ ಪಾಂಡ್ಯ (17)ಅಗ್ರ ಸ್ಕೋರರ್ ಎನಿಸಿಕೊಂಡರು.

- Advertisement -

ಮುಂಬೈ ಇಂಡಿಯನ್ಸ್ ನೀಡಿದ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.1 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 132 ಗಳಿಸಿ 4 ವಿಕೆಟ್ ಗಳ ಜಯ ಸಾಧಿಸಿತು. ಶ್ರೇಯಸ್ ಅಯ್ಯರ್ (33*) ರಿಶಬ್ ಪಂತ್(26) ರವಿಚಂದ್ರನ್ ಅಶ್ವಿನ್ (20*) ಉತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡಿದರು.

- Advertisement -

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಅವಿಶ್ ಖಾನ್ 3, ಅಕ್ಷರ್ ಪಟೇಲ್ 3 ಅನ್ರಿಚ್ ನೋರ್ಟ್ಜೆ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.

- Advertisment -

Most Popular