Home ಕ್ರೀಡೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

ಅಬುಧಾಬಿ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 47 ನೇ ಪಂದ್ಯದಲ್ಲಿ‌ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡವು 7 ವಿಕೆಟ್ ಗಳ ಗೆಲುವು ಸಾಧಿಸಿದೆ.

- Advertisement -

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳ ಗುರಿಯನ್ನು ನೀಡಿತು. ಆರಂಭಿಕ ಆಟಗಾರ ರುತುರಾಜ್ ಗೈಕ್ವಾಡ್ ಆಕರ್ಷಕ ಶತಕದ ನೆರವಿನಿಂದ ದೊಡ್ಡ ಮೊತ್ತದ ರನ್ ಗಳ ಗುರಿಯನ್ನು ನೀಡಿತು. ರುತುರಾಜ್ ಗೈಕ್ವಾಡ್ (101*) ರವೀಂದ್ರ ಜಡೇಜ(32*) ಡು ಪ್ಲೆಸಿಸ್(25) ಮೊಯಿನ್ ಅಲಿ (21) ಅಗ್ರ ಸ್ಕೋರರ್ ಎನಿಸಿಕೊಂಡರು.

- Advertisement -

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ ಗುರಿಯನ್ನು ರಾಜಸ್ಥಾನ್ ತಂಡವು 17.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 190 ಗಳಿಸಿ 7 ವಿಕೆಟ್ ಗಳ ಜಯ ಸಾಧಿಸಿತು. ರಾಜಸ್ಥಾನ ರಾಯಲ್ಸ್ ನ ಆರಂಭಿಕ ಆಟಗಾರರಾದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ ಗೆ 77 ರನ್ ಗಳ ಕಲೆ ಹಾಕಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಶಿವಮ್ ದುಭೆ (64*) ಯಶಸ್ವಿ ಜೈಸ್ವಾಲ್ (50) ಎವಿನ್ ಲೆವಿಸ್ (27) ಸಂಜು ಸಾಮ್ಸನ್ (28) ಪಿಲಿಪ್ಸ್ (14*) ಉತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವಿನ ಹಾದಿ ಸುಗಮಗೊಳಿಸಿದರು.

- Advertisement -

ರಾಜಸ್ಥಾನ್ ರಾಯಲ್ಸ್ ನ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ರಾಹುಲ್ ತಿವಾತಿಯ 3 ಮತ್ತು ಚೇತನ್ ಸಕಾರಿಯ ಒಂದು ವಿಕೆಟ್ ಪಡೆದು ಮಿಂಚಿದರು.

- Advertisment -

Most Popular