Home ಕ್ರೀಡೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ 6 ವಿಕೆಟ್ ಗಳ ಜಯ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ಗೆ 6 ವಿಕೆಟ್ ಗಳ ಜಯ

ದುಬೈ: ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ 49 ನೇ ಪಂದ್ಯದಲ್ಲಿ‌ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 6 ವಿಕೆಟ್ ಗಳ ಗೆಲುವು ಸಾಧಿಸಿದೆ.

- Advertisement -

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 115 ರನ್ ಗಳ ಗುರಿಯನ್ನು ನೀಡಿತು. ವಿಲಿಯಮ್ಸನ್ (26) ಅಬ್ದುಲ್ ಸಮದ್ (25) ಪ್ರಿಯಂ ಗರ್ಗ್ (21) ಅಗ್ರ ಸ್ಕೋರರ್ ಎನಿಸಿಕೊಂಡರೆ, ಉಳಿದ ಆಟಗಾರರ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನದಿಂದ ಕಡಿಮೆ ರನ್ ಗಳಿಸುವಲ್ಲಿ ತಂಡ ಶಕ್ತವಾಯಿತು.

- Advertisement -

ಸನ್ ರೈಸರ್ಸ್ ಹೈದರಾಬಾದ್ ನೀಡಿದ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ಗಳಿಸಿ 6 ವಿಕೆಟ್ ಗಳ ಗೆಲುವು ಸಾಧಿಸಿತು. ಕೊಲ್ಕತ್ತಾ ನೈಟ್ ರೈಡರ್ಸ್ ನ ಶುಬ್ಮಾನ್ ಗಿಲ್ (57) ನಿತೀಶ್ ರಾಣಾ (25) ದಿನೇಶ್ ಕಾರ್ತಿಕ್ (18*) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನ ಪ್ರದಾನ ಪಾತ್ರ ವಹಿಸಿದರು.

- Advertisement -

ಕೊಲ್ಕತ್ತಾ ನೈಟ್ ರೈ ಉತ್ತಮ ಬೌಲಿಂಗ್ ಪ್ರದರ್ಶನ ನಡೆಸಿದ ಟಿಮ್ ಸೌತಿ, ಶಿವಮ್ ಮಾವಿ, ಚಕ್ರವರ್ತಿ ತಲಾ 2 ಮತ್ತು ಶಾಕಿಬ್ ಅಲ್ ಹಸನ್ 1 ವಿಕೆಟ್ ಪಡೆದು ಮಿಂಚಿದರು.

- Advertisment -

Most Popular