Home ನಮ್ಮ ರಾಜ್ಯ 20 ವರ್ಷಗಳ ಸೇವಾವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾದ ಐಪಿಎಸ್ ಮಹಿಳಾ ಅಧಿಕಾರಿ ಯಾರು ಗೊತ್ತೇ?

20 ವರ್ಷಗಳ ಸೇವಾವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾದ ಐಪಿಎಸ್ ಮಹಿಳಾ ಅಧಿಕಾರಿ ಯಾರು ಗೊತ್ತೇ?

ಬೆಂಗಳೂರು: ನೇರ ಮತ್ತು ನಿಷ್ಠುರ ಸ್ವಭಾವದಿಂದ ಹೆಸರು ಮಾಡಿರುವ ಐಪಿಎಸ್‌ ಅಧಿಕಾರಿ ಡಿ ರೂಪಾ ಅವರು ತಮ್ಮ ಇಪ್ಪತ್ತು ವರ್ಷಗಳ ಸೇವಾವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ವರ್ಗಾವಣೆಯಾಗಿದ್ದಾರೆ ! 

- Advertisement -

ರಾಜ್ಯ ಗೃಹ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಗೊಂಡ ಮರುದಿನವೇ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. 

- Advertisement -

2000 ಬ್ಯಾಚ್‌ನ ರೂಪಾ, ಪ್ರೊಬೇಷನರಿ ಅವಧಿ ಸೇರಿ 20 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿದ್ದಾರೆ. 2017ರ ಜೂನ್‌ನಲ್ಲಿ ಬಂದೀಖಾನೆ ಡಿಐಜಿಪಿ ಹುದ್ದೆಗೆ ಹಿಂದಿನ ಸಿದ್ದರಾಮಯ್ಯ ಸರಕಾರ ವರ್ಗಾವಣೆ ಮಾಡಿತ್ತು. ಈ ವೇಳೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವುದನ್ನು ಬಹಿರಂಗಪಡಿಸಿದ್ದರು. ಹೀಗಾಗಿ, ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಒಳಗೆ ರೂಪಾ ಅವರನ್ನು ರಸ್ತೆ ಸುರಕ್ಷತೆ ಆಯುಕ್ತರ ಹುದ್ದೆಗೆ ಎತ್ತಂಗಡಿ ಮಾಡಲಾಗಿತ್ತು. 

- Advertisement -

ನಂತರ ಅಗ್ನಿಶಾಮಕ ಇಲಾಖೆಯಲ್ಲಿ ಕೆಲ ಕಾಲ ಇದ್ದು, ರೈಲ್ವೆ ಪೊಲೀಸ್‌ ಐಜಿಪಿ ಆಗಿದ್ದರು. ಇದೇ ಆಗಸ್ಟ್‌ ನಲ್ಲಿ ಗೃಹ ಕಾರ್ಯದರ್ಶಿ ಹುದ್ದೆಗೆ ವರ್ಗಾಯಿಸಲಾಗಿತ್ತು. ಈ ಹುದ್ದೆಗೆ ನೇಮಕವಾದ ಮೊದಲ ಮಹಿಳಾ ಅಧಿಕಾರಿ ಆಗಿದ್ದರು. ಆದರೆ, ಸೇಫ್‌ ಸಿಟಿ ಯೋಜನೆ ಟೆಂಡರ್‌ ವಿಚಾರದಲ್ಲಿ ಹೆಚ್ಚುವರಿ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಅವರೊಂದಿಗಿನ ವಿವಾದದಿಂದ ಕೇವಲ ಐದೇ ತಿಂಗಳಲ್ಲಿ ವರ್ಗಾವಣೆಗೊಂಡಿದ್ದಾರೆ. ಸಾಮಾನ್ಯವಾಗಿ ಐಪಿಎಸ್‌ ಅಧಿಕಾರಿಗಳು ಒಂದೊಂದು ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸುವುದು ವಾಡಿಕೆ. 

- Advertisment -

Most Popular