Home ಕ್ರೈಂ ಸುದ್ದಿ ಕಬಕ: ಯುವಕನಿಗೆ ಕಬ್ಬು ಕೊಡಿಸುವುದಾಗಿ ಹೇಳಿ ಅತ್ಯಾಚಾರ

ಕಬಕ: ಯುವಕನಿಗೆ ಕಬ್ಬು ಕೊಡಿಸುವುದಾಗಿ ಹೇಳಿ ಅತ್ಯಾಚಾರ

ಪುತ್ತೂರು: ಕಬಕ ಗ್ರಾಮದ ಮುರ ರೈಲ್ವೇ ಕ್ರಾಸ್ ಬಳಿ 20 ವರ್ಷದ ಎಂಡೋಪೀಡಿತ ಯುವಕನಿಗೆ ಕಬ್ಬು ಕೊಡಿಸುವುದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.

- Advertisement -

ಶುಕ್ರವಾರ ಸಂಜೆ ಯುವಕ ಸಂಜೆ 6.00 ಗಂಟೆಗೆ ವಾಕಿಂಗ್ ಗೆಂದು ಮನೆಯಿಂದ ಹೋಗಿದ್ದು ಮನೆಗೆ ಮರಳಿದ ಸಂದರ್ಭದಲ್ಲಿ ಆತನ ವಸ್ತ್ರ ಮಣ್ಣಿನಿಂದ ಕೂಡಿದನ್ನು ಕಂಡು ಮನೆ ಮಂದಿ ವಿಚಾರಿಸಿದಾಗ ಅತ್ಯಾಚಾರದ ಯತ್ನ ಬೆಳಕಿಗೆ ಬಂದಿದೆ.

- Advertisement -

ಆರೋಪಿ ಮಹಮ್ಮದ್ ಹನೀಫ್ ಕಬ್ಬು ನೀಡುವ ನೆಪದಲ್ಲಿ ಮುರ ರೈಲ್ವೇ ಕ್ರಾಸ್ ಹತ್ತಿರ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. ಯುವಕ‌ ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ. ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲ ಮಾಡುವ ಬೆದರಿಕೆ ಒಡ್ಡಿದ್ದಾನೆ. ಈ ಬಗ್ಗೆ ಯುವಕನ ತಂದೆ ನೀಡಿದ ದೂರಿನಂತೆ ಪುತ್ತೂರು ನಗರ‌‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ಘಟನೆ ಸಂಬಂಧ ಆರೋಪಿ ಮಹಮ್ಮದ್ ಹನೀಫ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisment -

Most Popular