Home ಅಂತಾರಾಷ್ಟ್ರೀಯ ಕಾಬೂಲ್: ಮಸೀದಿ ಮೇಲೆ ಆತ್ಮಹತ್ಯಾ ಬಾಂಬ್‌:ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ಏರಿಕೆ

ಕಾಬೂಲ್: ಮಸೀದಿ ಮೇಲೆ ಆತ್ಮಹತ್ಯಾ ಬಾಂಬ್‌:
ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ಏರಿಕೆ

ಕಾಬೂಲ್: ಅಫ್ಗಾನಿಸ್ತಾನದ ಕುಂದುಜ್‌‌ನಲ್ಲಿ ಶಿಯಾ ಮಸೀದಿ ಮೇಲೆ ನಡೆದ ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

- Advertisement -

“ಆತ್ಮಹತ್ಯಾ ಬಾಂಬ್‌ ದಾಳಿಯಲ್ಲಿ ಸುಮಾರು 100 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ” ಎಂದು ತಾಲಿಬಾನ್‌ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

- Advertisement -

ದಾಳಿಯ ಸಂದರ್ಭ ಮಸೀದಿಯಲ್ಲಿದ್ದ ಹೆಚ್ಚಿನ ಮಂದಿ ಸಾವನ್ನಪ್ಪಿದ್ದಾರೆ. ಮಸೀದಿಯ ಒಳಗೆ ಪ್ರಾರ್ಥನೆ ನಡೆಸುತ್ತಿದ್ದವರ ನಡುವೆ ಬೆರೆತು ಆತ್ಮಹತ್ಯಾ ಬಾಂಬರ್‌ ದಾಳಿ ಮಾಡಿರಬಹುದು ಎಂದು ಕುಂದುಜ್‌ ಪ್ರಾಂತ್ಯದ ಉಪ ಪೊಲೀಸ್ ಮುಖ್ಯಸ್ಥ ಮೊಹಮ್ಮದ್ ಒಬೈದಾ ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -
- Advertisment -

Most Popular