Home ಕಾನೂನು ಮಾಹಿತಿ ಪ್ರವಾದಿ ಮುಹಮ್ಮದ್‌ (ಸ.ಅ) ಅವರ ವಿವಾದಾತ್ಮಕ ಕಾರ್ಟೂನ್‌ ರಚಿಸಿದ್ದ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ನಿಧನ

ಪ್ರವಾದಿ ಮುಹಮ್ಮದ್‌ (ಸ.ಅ) ಅವರ ವಿವಾದಾತ್ಮಕ ಕಾರ್ಟೂನ್‌ ರಚಿಸಿದ್ದ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ನಿಧನ

ಡೆನ್ಮಾರ್ಕ್: 2005ರಲ್ಲಿ ಪ್ರವಾದಿ ಮೊಹಮ್ಮದ್ ಸ.ಅ. ಅವರ ಕಾರ್ಟೂನ್ ಬರೆದು ವಿಶ್ವದಾದ್ಯಂತ ಮುಸ್ಲಿಂ ಧರ್ಮದ ಜನರನ್ನು ಕೆರಳಿಸಿದ್ದ ಕಾರ್ಟೂನ್‌ಗಳಿಂದಲೇ ಹೆಸರುವಾಸಿ ಆಗಿದ್ದ ಡ್ಯಾನಿಶ್‌ ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ ದೀರ್ಘಕಾಲದ ಅನಾರೋಗ್ಯದಿಂದ ನಿಧನ ಹೊಂದಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

ವ್ಯಂಗ್ಯಚಿತ್ರಕಾರ ಕರ್ಟ್ ವೆಸ್ಟರ್‌ಗಾರ್ಡ್‌ಗೆ 86 ವಯಸ್ಸಾಗಿತ್ತು. ಕರ್ಟ್ ವೆಸ್ಟರ್‌ಗಾರ್ಡ್‌ 1980ನೇ ಇಸವಿಯಲ್ಲಿ ಡ್ಯಾನಿಶ್‌ ದಿನಪತ್ರಿಕೆಯಾದ ಜೆಲ್ಲ್ಯಾಂಡ್ಸ್-ಪೋಸ್ಟನ್ನಲ್ಲಿ ವ್ಯಂಗ್ಯಚಿತ್ರಕಾರನಾರಗಿ ಕೆಲಸ ಮಾಡುತ್ತಿದ್ದನು.

- Advertisement -

ಈತ ತುಂಬಾ ವೈವಿಧ್ಯಮಯ ಕಾರ್ಟೂನ್ಗಳನ್ನು ಬಿಡಿಸಿದ್ದು, 2005ರಲ್ಲಿ ಬರೆದ ಪ್ರವಾದಿ ಮೊಹಮ್ಮದ್ ಸ.ಅ ಅವರ ಕಾರ್ಟೂನ್ ಇಡೀ ವಿಶ್ವದಾದ್ಯಂತ ಮುಸ್ಲಿಂ ಧರ್ಮದ ಜನರನ್ನು ಕೆರಳಿಸಿತ್ತು ಮತ್ತು ಈ ಘಟನೆಯ ನಂತರವೇ ಇವರ ಹೆಸರು ಇಡೀ ವಿಶ್ವದ ಜನರಿಗೆ ತಿಳಿದಿತ್ತು.

- Advertisement -

ಈ ದಿನಪತ್ರಿಕೆ ಇಸ್ಲಾಂ ಧರ್ಮವನ್ನು ಟೀಕಿಸಿ ಪ್ರಕಟಿಸಲಾದ 12 ವ್ಯಂಗ್ಯಚಿತ್ರಗಳಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಕಾರ್ಟೂನ್ ಸಹ ಒಂದು‌. ಇಸ್ಲಾಂ ಧರ್ಮದಲ್ಲಿ ಪ್ರವಾದಿ ಮೊಹಮ್ಮದ್ ಚಿತ್ರವನ್ನು ಪ್ರದರ್ಶಿಸುವುದು ನಿಷೇಧಿಸಲಾಗಿದ್ದು, ಡೆನ್ಮಾರ್ಕಿನಲ್ಲಿ ಅನೇಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.

ಹಲವಾರು ಮುಸ್ಲಿಂ ದೇಶಗಳ ರಾಯಭಾರಿಗಳಿಂದ ಡೆನ್ಮಾರ್ಕ್ ಸರ್ಕಾರಕ್ಕೆ ಈ ದಿನಪತ್ರಿಕೆಯಲ್ಲಿ ಪ್ರಕಟವಾದಂತಹ ಕಾರ್ಟೂನ್‌ಗಳ ಬಗ್ಗೆ ಅನೇಕ ದೂರುಗಳು ಬಂದಿದ್ದವು ಎಂದು ಹೇಳಲಾಗಿತ್ತು. ಇದಲ್ಲದೆ 2015ರಲ್ಲಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ಫ್ರೆಂಚ್ ನಿಯತಕಾಲಿಕ ಚಾರ್ಲಿ ಹೆಬ್ಡೋ ಕಚೇರಿ ಮೇಲೆ ದಾಳಿ ಮಾಡಲಾಯಿತು ಮತ್ತು ಈ ದಾಳಿಯಲ್ಲಿ ಸುಮಾರು 12 ಜನರು ಮೃತಪಟ್ಟಿದ್ದರು.

- Advertisment -

Most Popular