Home ಅಂತಾರಾಷ್ಟ್ರೀಯ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಮೃತ್ಯು

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಮೃತ್ಯು

ಸ್ಟಾಕ್‌ ಹೋಂ: ಪ್ರವಾದಿ ಮುಹಮ್ಮದ್ (ಸ.ಅ) ಅವರ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಪ್ರವಾದಿ ಮುಹಮ್ಮದ್‌ (ಸ.ಅ)ಅವರ ವ್ಯಂಗ್ಯ ರೇಖಾ ಚಿತ್ರ ರಚಿಸುವ ಮೂಲಕ ವಿವಾದಕ್ಕೀಡಾಗಿದ್ದ ಸ್ವಿಡೀಶ್‌ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸ್ವೀಡನ್‌ ಮಾಧ್ಯಮಗಳನ್ನು ಆಧರಿಸಿ ವಾಷಿಂಗ್ಟನ್ ಟೈಮ್ಸ್ ವರದಿ ಮಾಡಿದೆ.

- Advertisement -

75 ವರ್ಷದ ವಿಲ್ಕ್ಸ್ ಪೊಲೀಸ್ ರಕ್ಷಣೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ದಕ್ಷಿಣ ಸ್ವೀಡನ್‌ನ ಮಾರ್ಕರಿಡ್ ಪಟ್ಟಣದ ಬಳಿ ಭಾನುವಾರ ಅಪಘಾತ ಸಂಭವಿಸಿದೆ. ಲಾರ್ಸ್ ವಿಲ್ಕ್ಸ್ ಮೃತ ಪಟ್ಟಿರುವುದನ್ನು ಅವರ ಸಂಗಾತಿ ದೃಢಪಡಿಸಿದ್ದಾರೆ ಎಂದು ಸ್ಥಳೀಯ ದೈನಿಕ ಹೇಳಿದೆ.

- Advertisement -
- Advertisment -

Most Popular