Home ಅಂತಾರಾಷ್ಟ್ರೀಯ ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ 2019ರಲ್ಲಿ ರಚಿಸಿದ ಹಾಡು ಇದೀಗ ಗಿನ್ನೆಸ್ ವಿಶ್ವ ದಾಖಲೆ!

ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ 2019ರಲ್ಲಿ ರಚಿಸಿದ ಹಾಡು ಇದೀಗ ಗಿನ್ನೆಸ್ ವಿಶ್ವ ದಾಖಲೆ!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪ್ರಸಿದ್ಧ ಗೀತ ರಚನಗಾರ್ತಿ ಟೋನಿ ವೆಸ್ಟನ್ ಅವರು 2019 ಮೇ ತಿಂಗಳಲ್ಲಿ ರಚಿಸಿದ ಹಾಡು ‘ಡಾನ್ಸ್ ಮಂಕಿ’ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ.‌

- Advertisement -

ಯಾವುದಾದರೂ ಒಂದೆರಡು ಸ್ವರ ಹೇಳಿದರೆ ಹಾಡನ್ನು ಗುರುತಿಸಬಲ್ಲ ಆ್ಯಪಲ್ ಮಾಲೀಕತ್ವದ ಶೇಜಾನ್ ಆ್ಯಪ್ ನಲ್ಲಿ ಅತಿ ಹೆಚ್ಚು ಬಾರಿ ಎಂದರೆ 36.6 ಮಿಲಿಯನ್ ಬಾರಿ ಗುರುತಿಸಲ್ಪಟ್ಟ ಹಾಡು ಇದಾಗಿದೆ. ಟೋನ್ಸ್ ಆ್ಯಂಡ್ ಐ ಎಂದು ಪ್ರಸಿದ್ಧರಾಗಿರುವ ಟೋನಿ ಅವರ ಎರಡನೇ ಸೋಲೋ ಹಾಡು ಇದಾಗಿದೆ.

- Advertisement -

ಮಹಿಳೆಯೊಬ್ಬಳು ಬರೆದ ಹಾಡೊಂದು ಇದೇ ಮೊದಲ ಬಾರಿಗೆ ಬಿಲ್ ಬೋರ್ಡ್ ಹಾಟ್ ನ 100 ಹಾಡುಗಳಲ್ಲಿ 96ನೇ ಸ್ಥಾನ ಪಡೆದಿದೆ. 30 ಕ್ಕೂ ಹೆಚ್ಚು ದೇಶಗಳಲ್ಲಿ ಅತಿ‌ ಹೆಚ್ಚು ಬಾರಿ ಕೇಳಿಸಿಕೊಂಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

- Advertisement -
- Advertisment -

Most Popular