Home ಅಂತಾರಾಷ್ಟ್ರೀಯ ರಷ್ಯಾದಲ್ಲಿ ವಿಮಾನ ಪತನ:16 ಮಂದಿ ಸಾವು ಶಂಕೆ!

ರಷ್ಯಾದಲ್ಲಿ ವಿಮಾನ ಪತನ:
16 ಮಂದಿ ಸಾವು ಶಂಕೆ!

ಮಾಸ್ಕೋ: ರಷ್ಯಾದಲ್ಲಿ 23 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗಿದ್ದು, ಕನಿಷ್ಠ 16 ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎನ್ನಲಾಗಿದೆ.

- Advertisement -

ಎಲ್ -410 ವಿಮಾನವು 23 ಜನರನ್ನು ಹೊತ್ತೊಯ್ಯುತ್ತಿದ್ದು, ಸ್ಥಳೀಯ ಸಮಯ ಬೆಳಗ್ಗೆ 9:23 ರ ಸುಮಾರಿಗೆ ಟಾಟಾರ್ಸ್ತಾನ್ ಗಣರಾಜ್ಯದ ಮೇಲೆ ಹಾರಾಟದ ಸಮಯದಲ್ಲಿ ಪತನಗೊಂಡಿದೆ ಎಂದು ಸಚಿವಾಲಯ ತನ್ನ ಟೆಲಿಗ್ರಾಂ ಚಾನೆಲ್ ನಲ್ಲಿ ತಿಳಿಸಿದ್ದು, ಏಳು ಜನರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ರಷ್ಯಾದ ಟಾಟರ್ಸ್ತಾನ್ ಪ್ರಾಂತ್ಯದ ಯಮನ್ಝೆಲಿನ್ಸ್ಕ್ ನಲ್ಲಿ ಈ ಘಟನೆ ನಡೆದಿದ್ದು, 21 ಮಂದಿ ಪ್ಯಾರಾಶೂಟ್ ಡೈವರ್ ಗಳು ಸೇರಿದಂತೆ ಒಟ್ಟು 23 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ರಷ್ಯಾದ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 23 ಮಂದಿಯ ಪೈಕಿ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಬದುಕುಳಿದ ಏಳು ಮಂದಿ ಆಸ್ಪತ್ರೆಯಲ್ಲಿದ್ದಾರೆ, ಒಬ್ಬರು ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಆರ್‌ಐಎ ನೊವೊಸ್ಟಿ ವರದಿ ಮಾಡಿದೆ.

- Advertisement -
- Advertisment -

Most Popular