Home ಅಂತಾರಾಷ್ಟ್ರೀಯ 19ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಂಜಾಬ್ ತಂಡದ ಆಟಗಾರ? ವೀಡಿಯೋ ವೈರಲ್

19ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಂಜಾಬ್ ತಂಡದ ಆಟಗಾರ? ವೀಡಿಯೋ ವೈರಲ್

ಅಫ್ಘಾನಿಸ್ತಾನ: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ
ಹಾಗೂ ಕಿಂಗ್ಸ್​ 11 ಪಂಜಾಬ್​ ತಂಡದ ಆಟಗಾರ ಮುಜೀಬ್ ಉರ್ ರಹಮಾನ್ ಅವರು ತನ್ನ ಬದುಕಿನ ಮತ್ತೊಂದು ಇನ್ನಿಂಗ್​ ಆರಂಭಿಸಿದ್ದು, 19ನೇ ವರ್ಷ ದಾಟಿರುವ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದರ ಬಗ್ಗೆ ವೀಡಿಯೊ ಒಂದು ವೈರಲ್ ಆಗಿದೆ.

- Advertisement -

ಐಪಿಎಲ್ ತಂಡದ ಕಿಂಗ್ಸ್ ಇಲೆವೆನ್ ಪಂಜಾಬ್‌ನ 19 ವರ್ಷದ ಆಫ್ ಸ್ಪಿನ್ನರ್ ಮುಜೀಬ್ ಉರ್ ರಹಮಾನ್ ಶುಕ್ರವಾರ ರಾತ್ರಿ ವಿವಾಹವಾಗಿದ್ದು, ಅವರ ವಿವಾಹ ಸಮಾರಂಭದಲ್ಲಿ ಹಲವಾರು ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಕ್ರಿಕೆಟಿಗರು ಭಾಗವಹಿಸಿದ್ದರು. ಸಮಾರಂಭದ ವೀಡಿಯೊವನ್ನು ಅಫ್ಘಾನಿಸ್ತಾನದ ಲೇಖಕ ಜಾಫರ್ ಹಾಂಡ್ ಹಂಚಿಕೊಂಡಿದ್ದು, ಇದರಲ್ಲಿ ಅಫ್ಘಾನಿಸ್ತಾನ ಕ್ರಿಕೆಟಿಗರು ಸಾಂಪ್ರದಾಯಿಕ ಗೀತೆಗಳಿಗೆ ನೃತ್ಯ ಮಾಡುವುದನ್ನು ಕಾಣಬಹುದು. ಮುಜೀಬ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

- Advertisement -

ಐಪಿಎಲ್ 2020 ರಲ್ಲಿ ಪಂಜಾಬ್ ಪರ ಮುಜೀಬ್ 2 ಪಂದ್ಯಗಳನ್ನು ಆಡಿದ್ದಾರೆ. ಇದೀಗ ಈ ವೀಡಿಯೊ ಭಾರೀ ವೈರಲ್ ಆಗಿದೆ.

- Advertisement -
- Advertisment -

Most Popular