Home ಅಂತಾರಾಷ್ಟ್ರೀಯ ನೇಪಾಳದ ರಾರಾ ಸರೋವರಕ್ಕೆ ಉರುಳಿದ ಬಿದ್ದ ಬಸ್‌:22 ಪ್ರಯಾಣಿಕರು ಮೃತ್ಯು, 16 ಮಂದಿ ಗಾಯ

ನೇಪಾಳದ ರಾರಾ ಸರೋವರಕ್ಕೆ ಉರುಳಿದ ಬಿದ್ದ ಬಸ್‌:
22 ಪ್ರಯಾಣಿಕರು ಮೃತ್ಯು, 16 ಮಂದಿ ಗಾಯ

ಕಠ್ಮಂಡು: ನೇಪಾಳದ ರಾರಾ ಸರೋವರಕ್ಕೆ ಖ್ಯಾತಿಯಾದ ಮುಗು ಜಿಲ್ಲೆಯಲ್ಲಿ ಮಂಗಳವಾರ ಬಸ್‌ವೊಂದು ನದಿಗೆ ಉರುಳಿಬಿದ್ದು 22 ಪ್ರಯಾಣಿಕರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ನೇಪಾಳಗುಂಜ್‌ನಿಂದ ಮುಗು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಗಾಮಗಧಿಯತ್ತ ತೆರಳುತ್ತಿದ್ದ ಬಸ್ ಛಾಯನಾಥ ರಾರಾ ಪುರಸಭೆ ವ್ಯಾಪ್ತಿಯಲ್ಲಿರುವ ಪಿನಾ ಝ್ಯಾರಿ ನದಿಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ವಿಜಯ ದಶಮಿ ಹಬ್ಬ ಆಚರಿಸಲು ದೇಶದ ವಿವಿಧ ಭಾಗಗಳಿಂದ ಮನೆಗೆ ಮರಳುತ್ತಿದ್ದ ಅನೇಕ ಪ್ರಯಾಣಿಕರು ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆಯ ಹೆಲಿಕಾಪ್ಟರ್ ಅನ್ನು ಸುರಖೇಟಿನಿಂದ ಅಪಘಾತ ನಡೆದ ಸ್ಥಳಕ್ಕೆ ಕಳುಹಿಸಲಾಗಿದೆ.

- Advertisement -
- Advertisment -

Most Popular