Home ನಮ್ಮ ಕರಾವಳಿ ವಿಟ್ಲ: ಕೋಳಿ ಸಾಗಾಟದ ಪಿಕಪ್ ಪಲ್ಟಿ: ಹಲವು ಕೋಳಿಗಳು ಸ್ಥಳೀಯರ ಪಾಲು

ವಿಟ್ಲ: ಕೋಳಿ ಸಾಗಾಟದ ಪಿಕಪ್ ಪಲ್ಟಿ: ಹಲವು ಕೋಳಿಗಳು ಸ್ಥಳೀಯರ ಪಾಲು

ವಿಟ್ಲ: ಪೆರುವಾಯಿಯಿಂದ ಬೆರಿಪ್ಪದವು ಕಡೆಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪೆರುವಾಯಿ ಸಂಕದ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದಿದೆ.

- Advertisement -

ಪೆರುವಾಯಿ ಸಂಕ ಕಿರಿದಾಗಿದ್ದು, ಇದಕ್ಕೂ ಮೊದಲು ಇಳಿಜಾರು ಪ್ರದೇಶವಾದ್ದರಿಂದ ಪಿಕಪ್ ಗೆ ಬ್ರೇಕ್ ಸಮಸ್ಯೆಯಾಗಿ ಸಂಕದ ಎದುರು ಭಾಗದಲ್ಲಿ ಅಡ್ಡಲಾಗಿ ಉರುಳಿ ಬಿದ್ದಿದೆ. ಚಾಲಕನ ಕೈಗೆ ತೀವ್ರವಾಗ ಗಾಯವಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಿಕಪ್ ನಲ್ಲಿದ್ದ ಹೆಚ್ಚಿನ ಕೋಳಿಗಳು ಸತ್ತಿದ್ದು, ಸ್ಥಳೀಯರ ಪಾಲಾಗಿದೆ. ಸ್ಥಳೀಯರ ನೆರವಿನಿಂದಿಗೆ ಪಿಕಪ್ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

- Advertisement -
- Advertisment -

Most Popular