Home ನಮ್ಮ ಕರಾವಳಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆ ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದ.ಕ ಜಿಲ್ಲೆ ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೇ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಪಪೂ ಶಿಕ್ಷಣ ಇಲಾಖೆ ಎಲ್ಲರನ್ನೂ ಉತ್ತೀರ್ಣ ಮಾಡಿದೆ. ದ.ಕ ಜಿಲ್ಲೆಯಲ್ಲಿ 600ರಲ್ಲಿ 600 ಅಂಕ ಪಡೆದ 445 ಮಂದಿ ವಿದ್ಯಾರ್ಥಿಗಳು ಇರುವ ಹಿನ್ನೆಲೆಯಲ್ಲಿ ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

- Advertisement -


ಸತತ ಎರಡನೇ ಬಾರಿ ದ.ಕ ಜಿಲ್ಲೆ ಈ ಸಾಧನೆ ಮಾಡಿದಂತಾಗಿದೆ. ಕಳೆದ ವರ್ಷದ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲೂ ದ.ಕ ಜಿಲ್ಲೆಯ ಮೊದಲ ಸ್ಥಾನ ಪಡೆದಿತ್ತು, ದ.ಕ ಜಿಲ್ಲೆಯಲ್ಲಿ ಖಾಸಗಿ ಹೊರತುಪಡಿಸಿ, ಎಲ್ಲ 32,342 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 16,355 ಹುಡುಗರು ಮತ್ತು 15,987 ಹುಡುಗಿಯರು.

- Advertisement -


ಕಲಾ ವಿಭಾಗದಲ್ಲಿ 1,909 ಹುಡುಗರು ಮತ್ತು 2,262 ಹುಡುಗಿಯರು, ವಾಣಿಜ್ಯ ವಿಭಾಗದಲ್ಲಿ 7,777 ಮತ್ತು 7,165, ವಿಜ್ಞಾನ ವಿಭಾಗದಲ್ಲಿ 6,669 ಮತ್ತು 6,560. ನಗರ ಪ್ರದೇಶದಲ್ಲಿ 11,078ಬಾಲಕರು, 10,921 ಹುಡುಗಿಯರು, ಗ್ರಾಮೀಣ ಭಾಗದಲ್ಲಿ 5,277 ಮತ್ತು 5,066 ಮಂದಿ ತೇರ್ಗಡೆಯಾಗಿದ್ದಾರೆ.

- Advertisement -
- Advertisment -

Most Popular