Home ಅಂತಾರಾಷ್ಟ್ರೀಯ ಕತಾರ್‌ ನ ಮರೂನಾ ಬೀಚ್:  ವಿಹಾರಕ್ಕಾಗಿ ತೆರಳಿದ ಭಾರತೀಯ ಮೂಲದ ಮೂವರು ಸಮುದ್ರಪಾಲು

ಕತಾರ್‌ ನ ಮರೂನಾ ಬೀಚ್:  
ವಿಹಾರಕ್ಕಾಗಿ ತೆರಳಿದ ಭಾರತೀಯ ಮೂಲದ ಮೂವರು ಸಮುದ್ರಪಾಲು

ದೋಹಾ: ಕತಾರ್‌ ನ ಮರೂನಾ ಬೀಚ್ ನಲ್ಲಿ ವಾರಾಂತ್ಯದ ವಿಹಾರಕ್ಕಾಗಿ ತೆರಳಿದ ಭಾರತೀಯ ಮೂಲದ ಮೂವರು ಸಮುದ್ರಪಾಲಾದ ದುರ್ಘಟನೆ ಶುಕ್ರವಾರ ನಡೆದಿದೆ.

- Advertisement -

ನೀರುಪಾಲಾದವರು ತಮಿಳುನಾಡು ಮೂಲದ ಬಾಲಾಜಿ ಬಲಗೂರು (38),ಪುತ್ರ ರಕ್ಷಣ್ (10) ಇನ್ನೊಂದು ಕುಟುಂಬಕ್ಕೆ ಸೇರಿದ ನೆರೆಮನೆಯ ವರ್ಷಿಣಿ ವೈದ್ಯನಾಥನ್ (12) ಎಂದು ತಿಳಿದುಬಂದಿದೆ.

- Advertisement -

ಎರಡು ಕುಟುಂಬಗಳು ಒಟ್ಟಾಗಿ ಬೀಚ್ ಗೆ ವಿಹಾರಕ್ಕೆಂದು ತೆರಳಿದ ವೇಳೆ ಭಾರಿ ಅಲೆ ಅಪ್ಪಳಿಸಿ ಮೂವರು ನೀರುಪಾಲಾಗಿದ್ದಾರೆ ಎಂದು ಬಾಲಾಜಿ ಅವರ ಸಂಬಂಧಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಲಾಜಿ ಮತ್ತು ವರ್ಷಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ಷಣ್ ಆಸ್ಪತ್ರೆಯಲ್ಲಿ ಮೂರು ಗಂಟೆಗಳ ನಂತರ ನಿಧನರಾಗಿದ್ದಾರೆ

- Advertisement -

ಬಾಲಾಜಿ ಅವರು ಕುಂಭಕೋಣಂ ಜಿಲ್ಲೆಯವರಾಗಿದ್ದು, ಕೆಇಒ ಇಂಟರ್ನ್ಯಾಷನಲ್ ಕನ್ಸಲ್ಟೆಂಟ್ಸ್ ನಲ್ಲಿ ಹಿರಿಯ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ವರ್ಷಿಣಿ ಅವರ ಕುಟುಂಬ ಚೆನ್ನೈ ಮೂಲದ್ದು ಎಂದು ತಿಳಿದು ಬಂದಿದೆ.

ಬಾಲಾಜಿ ಅವರ ಮಗ ರಕ್ಷನ್ ಬಿರ್ಲಾ ಪಬ್ಲಿಕ್ ಸ್ಕೂಲ್ 5 ನೇ ತರಗತಿಯ ವಿದ್ಯಾರ್ಥಿ. ವರ್ಷಿಣಿ ಡಿಪಿಎಸ್ ಮೊನಾರ್ಕ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿದ್ದಳು.

ಮೂವರ ಮೃತ ದೇಹಗಳನ್ನು ಊರಿಗೆ ತರುವ ವ್ಯವಸ್ಥೆ ಮಾಡಲಾಗಿದ್ದು, ತಮಿಳುನಾಡಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

- Advertisment -

Most Popular